ಬೆಳಗಾವಿ : ಐದು ಕೋಟಿ ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಮಾಡಿದ್ದ ಪ್ರಕರಣ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಘಟಪ್ರಭಾ ಠಾಣಾ ಪೊಲೀಶರು ಮಂಜುಳಾ ರಾಮನಗಟ್ಟಿ ಎಂಬುವರನ್ನು ಬಂಧಿಸಿದ್ದಾರೆ.
ಕಳೆದ ಫೆ.14ರಂದು ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ಅಂಬಿ ಕಿಡ್ನಾಪ್ ಆಗಿತ್ತು. ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅವರನ್ನು ಕಿಡ್ನಾಪ್ ಮಾಡಿ ಐದು ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಕಿಡ್ನಾಪ್ ಪ್ರಕರಣ ದಾಖಲಾದ 24 ಗಂಟೆಯಲ್ಲಿ ಬಸವರಾಜ ರಕ್ಷಣೆ ಮಾಡಿದ್ದ ಪೊಲೀಸರು, ಪ್ರಕರಣ ಸಂಬಂಧ ಆರು ಜನ ಬಂಧಿಸಿದ್ದರು.
ತನಿಖೆ ವೇಳೆ ಕಿಡ್ನಾಪ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು ಕಿಂಗ್ ಪಿನ್ ಮಂಜುಳಾ ಅನ್ನೋ ವಿಚಾರ ಬಹಿರಂಗವಾಗಿದೆ. ಮಂಜುಳಾ ಮಗ ಈಶ್ವರ ರಾಮಗನಟ್ಟಿ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಬಹಿರಂಗಗೊಂಡಿದ್ದು, ತಾಯಿ ನೀಡಿದ ಪ್ಲ್ಯಾನ್ ಮೇಲೆ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತನಿಖೆ ಸಂದರ್ಭದಲ್ಲಿ ತಾಂತ್ರಿಕ ಸಾಕ್ಷಿ ಸೇರಿ ಆರೋಪಿಗಳ ಹೇಳಿಕೆ ಆಧಾರದ ಮೇಲೆ ಮಂಜುಳಾರನ್ನು ಬಂಧಿಸಲಾಗಿದೆ. ಇನ್ನೂ ಕಿಡ್ನಾಪ್ ಕೇಸ್ ನಲ್ಲಿ ಈವರೆಗೂ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.