ಯಾದಗಿರಿ: ಡಿಸಿಎಂ ಡಿ.ಕೆ.ಶಿವಕುಮಾರ್ರ ನಡೆ–ನುಡಿ ಬಗ್ಗೆ ಕಾಂಗ್ರೆಸ್ನಲ್ಲೇ ಅಪಸ್ವರ ಎದ್ದಿದೆ. ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದ ಡಿ.ಕೆ ಶಿವಕುಮಾರ್ ಶಿವರಾತ್ರಿಯಂದು ಅಮಿತ್ ಶಾ ಜೊತೆ ಶಿವ ಧ್ಯಾನ ಮಾಡಿದರು. ಇದು ಕೆಲ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗಿಸಿದೆ. ಆದ್ರೆ, ಬಿಜೆಪಿ ಇದರ ಲಾಭ ಪಡೆದುಕೊಳ್ಳಲು ದಾಳ ಉರುಳಿಸಿದೆ.
ಇದರ ನಡುವೆ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಯಾದಗಿರಿಯಲ್ಲಿಂದು ಮಾತನಾಡಿರುವ ಕೋಡಿಹಳ್ಳಿ ಶ್ರೀಗಳು, ಎಲ್ಲಾ ಸಮುದಾಯದ ಎಲ್ಲಾ ಜಾತಿ ಎಲ್ಲಾ ವರ್ಗದವರು ಈ ಭೂಮಿ ಮೇಲೆ ವಾಸವಿದ್ದಾರೆ.
Limited-Time Deal: ವಿದೇಶಿ ಪ್ರವಾಸ ಮಾಡುವವರಿಗೆ ಗೋಲ್ಡನ್ ಆಫರ್: ಜಸ್ಟ್ 11 ರೂಪಾಯಿಗೆ ವಿಮಾನ ಟಿಕೆಟ್..!
ಪ್ರಾಚೀನ ಕಾಲದಿಂದಲೂ ಹಾಲಮತ ಸಮಾಜ ಅಂತ ಆಂದ್ರೆ ಅಡವಿಯಲ್ಲಿದ್ದು ಕುರಿಗಳನ್ನ ಸಾಕೋದು ಮಾಡ್ತಾರೆ. ಕುರಿಯ ಇಕ್ಕಿಯಲ್ಲಿ ಲಿಂಗವನ್ನ ಕಂಡವರು. ಪ್ರಕೃತಿ ಮೇಲೆ ಗಾಳಿಯ ಮೇಲೆ ಭೂಮಿಯ ಮೇಲೆ ಅವರು ಅಡವಿಯಲ್ಲಿ ಇದ್ದು ಕಂಡದ್ದು ನೋಡಿದ್ದ ಅನುಭವಸಿದ್ದನ್ನ ಹೇಳುತ್ತಾ ಬಂದಿದ್ದಾರೆ ಅದು ಕುರುವಿನ ರಟ್ಟು.
ಹಾಲು ಕೆಟ್ಟರು ಹಾಲಮತ ಸಮಾಜ ಕೆಡುವುದಿಲ್ಲ ಅಂತ ಹೇಳುತ್ತಾರೆ. ಇವತ್ತು ಹಾಲಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಅವರಾಗೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತೆ ಎಂದು ಯುಗಾದಿ ಮೇಲೆ ಹೇಳುತ್ತೇನೆ ಎಂದಿದ್ದಾರೆ. ಈ ಮೂಲಕ ಕೋಡಿಹಳ್ಳಿ ಶ್ರೀ ಪರೋಕ್ಷವಾಗಿ ಸದ್ಯ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.