ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ. ನಗರದಲ್ಲಿ ಜನರು ಬಿಸಿಲಿನ ಹೊಡೆತಕ್ಕೆ ಕಂಗಲಾಗಿದ್ದರೇ, ಇತ್ತ ವಿಷಕಾರಿ ಹಾವುಗಳು ತಣ್ಣಗಿನ ಜಾಗವನ್ನು ಹುಡುಕಿಕೊಂಡು ಮನೆಯೊಳಗೆ ಬರುತ್ತಿವೆ ಎಂದು ಭಯಗೊಂಡಿದ್ದಾರೆ. ಅಡುಗೆ ಮನೆ, ಹಾಲ್, ಬಾತ್ ರೂಮ್, ವಾಟರ್ ಟ್ಯಾಂಕ್ ಸೇರಿದಂತೆ ಎಲ್ಲಾ ಕಡೆ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಮನೆಯೊಳಗೆ ಇರಲು ನಿವಾಸಿಗಳು ಭಯ ಬೀಳುತ್ತಿದ್ದಾರೆ.
ಇನ್ನೂ ಸುಡು ಬಿಸಿಲಿಗೆ ಹಾವುಗಳ ಹಾವಳಿ ಹೆಚ್ಚಾಗಿದೆ. ನಿಮ್ಮ ಮನೆಯ ಸುತ್ತಲಿರುವ ಗೋಡೆ ಬಿರುಕು ಮತ್ತು ರಂಧ್ರಗಳನ್ನು ಮುಚ್ಚುವುದು ಹಾವುಗಳ ತಡೆಗೆ ಉತ್ತಮ ಉಪಾಯವಾಗಿದೆ. ಕೆಲವು ಬಾರಿ ಕಿಟಕಿಗಳು, ಮೇಲ್ಚಾವಣಿ ಮತ್ತು ಬಾಗಿಲು ಸಂಧಿಗಳ ಸಹಾಯದಿಂದ ಹಾವುಗಳು ಒಳಗೆ ಬರುವ ಸಾಧ್ಯತೆಯು ಸಹ ಹೆಚ್ಚು ಈ ರೀತಿ ತಪ್ಪುಗಳು ಅಗದೇ ಇರುವ ಹಾಗೆ ನೋಡಿಕೊಳ್ಳಿ, ಇವುಗಳನ್ನು ಸರಿಯಾಗಿ ಮುಚ್ಚುಲು ಸಿಮೆಂಟ್ ಅಥವಾ ಜಾಲರಿ ಗಳನ್ನು ಬಳಸಿ.
ನೀವು ನಿಮ್ಮ ಮನೆಯ ಮುಂದೆ ಮುಖಮಂಟಪ (ಜಗುಲಿ)ಅಥವಾ ಡೆಕ್ಗಳಂತಹ ಹೊರಾಂಗಣ ಪ್ರದೇಶಗಳನ್ನು ಹೊಂದಿದ್ದರೆ, ರೇಲಿಂಗ್ಗಳು ಅಥವಾ ಇತರ ಯಾವುದೇ ಪ್ರವೇಶ ಮಾರ್ಗಗಳನ್ನು ಮರದ ಸೀಲರ್ ಅಥವಾ ಎಪಾಕ್ಸಿ ಅಂಟುಗಳಂತಹ ಹವಾಮಾನ-ನಿರೋಧಕ ವಸ್ತುಗಳಿಂದ ಸರಿಯಾಗಿ ಮುಚ್ಚುವ ಮೂಲಕ ಹಾವುಗಳ ತೊಂದರೆಯಿಂದ ಪಾರಾಗಬಹುದು.
ಹಾವುಗಳ ಸಂಪೂರ್ಣ ತಡೆಗಟ್ಟುವಿಕೆ ಸ್ವಚ್ಛವಾದ ಮನೆಯಿಂದ ಮಾತ್ರ ಸಾಧ್ಯ. ಇದರರ್ಥ ನಿಮ್ಮ ಮನೆಯ ಸುತ್ತಲಿನ ಯಾವುದೇ ಭಗ್ನಾವಶೇಷಗಳು ಅಥವಾ ಅಸ್ತವ್ಯಸ್ತತೆಯನ್ನು, ಉದಾಹರಣೆಗೆ ತೋಟದಲ್ಲಿ ಬಳಸುವ ಉಪಕರಣಗಳು, ಹಳೆಯ ಪೀಠೋಪಕರಣಗಳು ಮತ್ತು ಮರದ ರಾಶಿಗಳು ಇವೆಲ್ಲವೂ ಹಾವುಗಳಿಗೆ ಅವಿತುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಇವುಗಳನ್ನು ಕಾಲಕಾಲಕ್ಕೆ ತೆರವುಗೊಳಿಸುವ ಕೆಲಸ ಮಾಡಿ.
ಮನೆಯ ಸುತ್ತ ಮಿತಿಮೀರಿ ಬೆಳೆದ ಸಸ್ಯವರ್ಗವನ್ನು ಕತ್ತರಿಸುವುದು, ಇದರೊಂದಿಗೆ ಗ್ಯಾರೇಜ್ಗಳಂತಹ ಸಾಮಾನ್ಯ ಪ್ರದೇಶಗಳ ಬಗ್ಗೆಯೂ ಸಹ ಗಮನವಹಿಸಿ, ಈ ಸ್ಥಳಗಳು ಚೆನ್ನಾಗಿ ಮುಚ್ಚಿ ಮತ್ತು ಹಾವುಗಳು ಅಡಗಿಕೊಳ್ಳಲು ಸಹಕರಿಸದಂತೆ ನೋಡಿಕೊಳ್ಳಿ .
ಹಾವುಗಳು ಪ್ರವೇಶಿಸಲು ಸಾಧ್ಯವಿರುವ ಯಾವುದೇ ಸ್ಥಳಗಳನ್ನು ಸ್ವಚ್ಛವಾಗಿಡುವುದು ಇಲ್ಲವೆ ತೆರವುಗೊಳಿಸುವುದು ಮುಖ್ಯ. ಇದರಲ್ಲಿ ಹಾವುಗಳನ್ನು ಆಕರ್ಷಿಸುವ ಆಹಾರದ ತುಣುಕುಗಳು ಮತ್ತು ನಿಮ್ಮ ಮನೆಯ ಬಳಿ ಇರುವ ಮರದ ಅಥವಾ ಎಲೆಗಳ ರಾಶಿಗಳನ್ನು, ಹಾವು ಪ್ರವೇಶಿಸಬಹುದಾದ ಅಂತರಗಳು ಅಥವಾ ಬಿರುಕಾದ ಕಿಟಕಿಗಳು, ಬಾಗಿಲು ಚೌಕಟ್ಟುಗಳು ಮತ್ತು ದ್ವಾರಗಳ ಸುತ್ತಲೂ ಅಗಾಗ ಪರಿಶೀಲಿಸಿ. ಇದರೊಂದಿಗೆ ವೃತ್ತಿಪರ ಹಾವು ತೆಗೆಯುವ ಪರಿಣಿತರಿಂದ ಸಲಹೆ ಪಡೆದುಕೊಳ್ಳಿ.
ಮನೆಯ ಸುತ್ತಮುತ್ತ ಹಾವುಗಳು ತೊಂದರೆ ಕೊಡುವುದನ್ನು ತಡೆಗಟ್ಟುವ ಮೊದಲು ಅವು ಯಾವ ರೀತಿ ಹಾವುಗಳು ಎಂಬುವುದರತ್ತ ಮೊದಲು ಗಮನವಹಿಸಿ. ಈ ಮಾಹಿತಿಯಿಂದ ನಿಮ್ಮ ಮನೆಯಗಳ ಸುತ್ತ ಹಾವುಗಳು ಒಳನುಗ್ಗುವವುದನ್ನು ತಡೆಯಬಹುದು.
ನೀವು ಹಿಡಿಯುವ ಯಾವುದೇ ಹಾವುಗಳನ್ನು ನಿರ್ವಹಿಸುವಾಗ ರಕ್ಷಣಾತ್ಮಕ ಉಡುಪುಗಳನ್ನು ಸಹ ಧರಿಸಬೇಕು, ಏಕೆಂದರೆ ಕೆಲವು ಜಾತಿಗಳು ವಿಷಕಾರಿ ಅಥವಾ ಅಪಾಯಕಾರಿಯಾಗಿರಬಹುದು. ಹೆಚ್ಚುವರಿಯಾಗಿ, ಸಾಧ್ಯವಾದರೆ ಹಾವುಗಳನ್ನು ಕೊಲ್ಲುವ ಬದಲು ನಿಮ್ಮ ಮನೆಯಿಂದ ದೂರ ಸ್ಥಳಾಂತರಿಸಲು ಪ್ರಯತ್ನಿಸಿ .
ನಿವಾರಕಗಳು ಹಾವುಗಳಿಗೆ ಅಹಿತಕರ ಅಥವಾ ಭಯಾನಕವೆನಿಸುವ ಕೆಲವು ವಾಸನೆ ಮತ್ತು ಶಬ್ದಗಳನ್ನು ಹೊರಸೂಸುವ ಮೂಲಕ ಹಾವುಗಳು ಬರದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತವೆ .ರಾಸಾಯನಿಕ ನಿವಾರಕಗಳನ್ನಸಹ ಬಳಕೆ ಮಾಡುವುದರ ಮೊಲಕ ನಾವು ಕ್ರಮೇಣವಾಗಿ ಹಾವುಗಳನ್ನು ನಿಯಂತ್ರಿಸಬಹುದು.