ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಈ ವಾರ ದೊಡ್ಡ ಹೈಡ್ರಾಮಾ ನಡೆದಿದೆ. ಶುರುವಾದ ಒಂದು ತಿಂಗಳಲ್ಲಿ ಬಾಯ್ಸ್ ಹಾಗೂ ಗರ್ಲ್ಸ್ ಮಧ್ಯೆ ಡ್ಯಾನ್ಸ್ ಯುದ್ಧ, ಸಂಗೀತ ಸಮರ ನಡೆದಿದೆ. ಇದೀಗ ಬಾಯ್ಸ್ ಹಾಗೂ ಗರ್ಲ್ಸ್ ಮಧ್ಯೆ ಟಾಸ್ಕ್ಗಳು ಶುರುವಾಗಿವೆ. ಹಾಡು ಹಾಗೂ ನೃತ್ಯದಲ್ಲಿ ಗರ್ಲ್ಸ್ ತಂಡ ಗೆಲುವಿನ ನಗೆ ಬೀರಿತ್ತು. ಇದೀಗ ಟಾಸ್ಕ್ಗಳಲ್ಲಿ ಯಾರು ಗೆಲ್ತಾರೆ ಎಂಬ ಕುತೂಹಲ ಆವರಿಸಿದೆ. ಈ ನಡುವೆ ಮಂಜು ಪಾವಗಡ – ಶೋಭಾ ಶೆಟ್ಟಿ ಮಧ್ಯೆ ವಾಗ್ವಾದ ನಡೆದಿದೆ. ಮಂಜು ಪಾವಗಡ ವಿರುದ್ಧ ಶೋಭಾ ಶೆಟ್ಟಿ ಬೆಂಕಿಯುಂಡೆಗಳನ್ನ ಉಗುಳಿದ್ದಾರೆ.
ಜೋರು ಧ್ವನಿಗೆ ಶೋಭಾ ಶೆಟ್ಟಿ ಹೆಸರುವಾಸಿ. ಶೋಭಾ ಶೆಟ್ಟಿ ರೊಚ್ಚಿಗೆದ್ರೆ.. ಏನೇನಾಗುತ್ತೆ ಅನ್ನೋದಕ್ಕೆ ‘ಬಿಗ್ ಬಾಸ್ ತೆಲುಗು 7’ ಹಾಗೂ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಗಳೇ ಸಾಕ್ಷಿ. ಹೀಗಾಗಿ, ಗೊತ್ತಿದ್ದೂ ಗೊತ್ತಿದ್ದೂ ಶೋಭಾ ಶೆಟ್ಟಿ ಅವರನ್ನ ಕೆರಳಿಸುವ ಸಾಹಸಕ್ಕೆ ಯಾರೂ ಕೈಹಾಕಲ್ಲ.
ಬಾಯ್ಸ್ ವರ್ಸಸ್ ಗರ್ಲ್ಸ್’ ಪ್ರೀಮಿಯರ್ ಸಂಚಿಕೆಯಲ್ಲಿ ಮಂಜು ಪಾವಗಡ – ಶೋಭಾ ಶೆಟ್ಟಿ ಮಧ್ಯೆ ಒಳ್ಳೆಯ ಈಕ್ವೇಷನ್ ಇತ್ತು. ತಮ್ಮ ತರಹ ವೇವ್ಸ್ ಮಾಡುವಂತೆ ಶೋಭಾ ಶೆಟ್ಟಿಗೆ ಮಂಜು ಪಾವಗಡ ರೇಗಿಸುತ್ತಿದ್ದರು. ಅದನ್ನ ಕಾಮಿಡಿಯಾಗಿಯೇ ಶೋಭಾ ಶೆಟ್ಟಿ ಭಾವಿಸಿದ್ದರು. ಆದ್ರೀಗ ಟಾಸ್ಕ್ ವಿಚಾರದಲ್ಲಿ ಮಂಜು ಪಾವಗಡ ಮಾಡಿದ ಕಾಮೆಂಟ್ ಶೋಭಾ ಶೆಟ್ಟಿಗೆ ರುಚಿಸಿಲ್ಲ. ಹೀಗಾಗಿ, ಮಂಜು ಪಾವಗಡ ವಿರುದ್ಧ ಶೋಭಾ ಶೆಟ್ಟಿ ಕೆಂಡಕಾರಿದ್ದಾರೆ.
ಈ ವಾರ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಮಧ್ಯೆ ಟಾಸ್ಕ್ಗಳು ನಡೆಯಲಿದ್ದು, ಎರಡೂ ತಂಡಗಳಿಗೆ ಬ್ಯಾಲೆನ್ಸಿಂಗ್ ಟಾಸ್ಕ್ ಕೊಡಲಾಗಿದೆ. ಇದರ ಅನುಸಾರ, ಹ್ಯಾಂಗಿಂಗ್ ಬ್ರಿಡ್ಜ್ ಮೇಲೆ ವಾಕ್ ಮಾಡಿಕೊಂಡು ಬಂದು ಪಿರಮಿಡ್ ಕಟ್ಟಬೇಕಿತ್ತು. ಗರ್ಲ್ಸ್ ತಂಡದಿಂದ ಶೋಭಾ ಶೆಟ್ಟಿ ಅಖಾಡಕ್ಕೆ ಇಳಿದಿದ್ದರು. ಬ್ಯಾಲೆನ್ಸಿಂಗ್ನಲ್ಲಿ ಶೋಭಾ ಶೆಟ್ಟಿ ಬಹುಶಃ ಎಡವಿರಬೇಕು. ಹೀಗಾಗಿ, ‘’ಕಾಲಲ್ಲಿ ಬ್ಯಾಲೆನ್ಸ್ ಮಾಡೋದು ನಾನು ಫಸ್ಟ್ ಟೈಮ್ ಆಡಿದ್ದು’’ ಎಂದು ಶೋಭಾ ಶೆಟ್ಟಿ ಹೇಳಿದಾಗ, ‘’ನಮ್ಮ ಮನೆ ಮೇಲೆ ಬಟ್ಟೆ ಒಣಗಾಗೋಕೆ ಕಟ್ಟಿದ್ರಲ್ಲ ಹಗ್ಗ.. ಅದರ ಮೇಲೆ ನಡೆಯುತ್ತಿದ್ದೆ ನಾನು’’ ಎಂದು ಮಂಜು ಪಾವಗಡ ಕೌಂಟರ್ ಕೊಡುತ್ತಾರೆ. ಕೂಡಲೆ ಕೆರಳಿದ ಶೋಭಾ ಶೆಟ್ಟಿ, ‘’ಏನೋ ಕೌಂಟರ್ ಕೊಡಬೇಕು ಅಂತ ಕೌಂಟರ್ ಕೊಡೋದಲ್ಲ.
ಆ ನಾನ್ ಸೆನ್ಸ್ ಕೌಂಟರ್ ಕೊಡಬೇಡಿ’’ ಎಂದು ತಿರುಗೇಟು ಕೊಟ್ಟಿದ್ದಾರೆ