ಬೆಂಗಳೂರು:- ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವವರಿಗೆ BWSSB ಬಿಗ್ ಶಾಕ್ ಕೊಟ್ಟಿದೆ.
ಕಳೆದ ವರ್ಷ ಬೇಸಿಗೆಯಲ್ಲಿ ಬೆಂಗಳೂರಿಗರಿಗೆ ನೀರಿಗೆ ಹಾಹಾಕಾರ ಉಂಟಾಗಿತ್ತು. ಅದರಲ್ಲೂ ಅಪಾರ್ಟ್ಮೆಂಟ್ ನಿವಾಸಿಗಳು ಅಕ್ಷರಶಃ ಪರದಾಡಿದ್ರು. ಟ್ಯಾಂಕರ್ ಮೂಲಕ ಜಲಮಂಡಳಿಯೇ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಿತ್ತು. ಆದರೆ ಈ ಬಾರಿ ಜಲಮಂಡಳಿ ತನ್ನ ವರಸೆ ಬದಲಿಸಿದೆ.
Pooja Hegde: ರಜನಿಕಾಂತ್ ಜೊತೆ ಹೆಜ್ಜೆ ಹಾಕಲಿರುವ ಪೂಜಾ ಹೆಗ್ಡೆ..! ಕರಾವಳಿ ಬ್ಯೂಟಿಯ ಸಂಭಾವನೆ ಎಷ್ಟು ಗೊತ್ತಾ..?
ಅಪಾರ್ಟ್ಮೆಂಟ್ಗಳು ಕೊಳವೆ ಬಾವಿ ಮೂಲಕ ನೀರಿನ ಅವಶ್ಯಕತೆ ಪೂರೈಕೆ ಮಾಡಿಕೊಳ್ತಿತ್ತು. ಆದರೆ ಬೆಂಗಳೂರಲ್ಲಿ ಅಂತರ್ಜಲ ಮಟ್ಟ ಇಳಿದು ಹೋಗಿದ್ದು, ಬೇಸಿಗೆ ಕಾಲದಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಹೀಗಾಗಿ ಕಳೆದ ವರ್ಷ ಅಪಾರ್ಟ್ಮೆಂಟ್ ನಿವಾಸಿಗಳು ನೀರಿಗಾಗಿ ಪರದಾಡಿದ್ರು. ಈ ಬಾರಿಯೂ ಅಂತಹ ವಾತಾವರಣ ನಿರ್ಮಾಣ ಆಗಲಿದ್ದು, ಜಲಮಂಡಳಿ ನೀರು ಪೂರೈಕೆಗಾಗಿ ಅಪಾರ್ಟ್ಮೆಂಟ್ನಲ್ಲೂ ಕಾವೇರಿ ಕನೆಕ್ಷನ್ ಕಡ್ಡಾಯ ಎಂದಿದ್ದು, ಇಲ್ಲದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡದಿರಲು ನಿರ್ಧರಿಸಿದೆ.
ಯಾವೆಲ್ಲಾ ಅಪಾರ್ಟ್ ಮೆಂಟ್ಗಳು ಇನ್ನು ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡಿಲ್ಲ ಅವರಿಗೆ ವೈಯುಕ್ತಿಕವಾಗಿಯೇ ಸಂಪರ್ಕ ಪಡೆದುಕೊಳ್ಳುವಂತೆ ಪತ್ರಗಳನ್ನು ನೀಡಿದ್ದೇವೆ. ಯಾರೆಲ್ಲಾ ಗ್ರೌಂಡ್ ವಾಟರ್ ಅನ್ನು ಹೆಚ್ಚು ಬಳಕೆ ಮಾಡ್ತಿದ್ದಾರೆ ಅವರು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳಲು ಅಗತ್ಯ ಕಾನೂನು ರಚನೆ ಮಾಡಿ ಸರ್ಕಾರಕ್ಕೆ ಕಳುಹಿಸುತ್ತಿದ್ದೇವೆ ಎಂದು BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.