ಬೆಂಗಳೂರು:- ಹೃದಯಾಘಾತದಿಂದ ಕಾರಿನಲ್ಲೇ ವ್ಯಕ್ತಿ ದುರ್ಮರಣ ಹೊಂದಿದ್ದು, ಮೃತನ ಕೈ ಮೇಲೆ ಸುಟ್ಟ ಗಾಯ ಪತ್ತೆಯಾಗಿದೆ.
IND vs NZ: ಇಂದು ಭಾರತ, ನ್ಯೂಜಿಲೆಂಡ್ ಬಿಗ್ ಫೈಟ್! ಸ್ಪಿನ್ನರ್ ಗಳ ಚಕ್ರವ್ಯೂಹ ಭೇದಿಸುತ್ತಾ ಟೀಮ್ ಇಂಡಿಯಾ!?
ಕೊಡಿಗೆಹಳ್ಳಿ ಬ್ರಿಡ್ಜ್ ಬಳಿ ಘಟನೆ ಸಂಭವಿಸಿದೆ. ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಯನ್ನು ಅಶ್ವಿನ್ ಕುಮಾರ್ ಎಂದು ಗುರುತಿಸಲಾಗಿದೆ. ಕೊಡಿಗೆಹಳ್ಳಿ ಬ್ರಿಡ್ಜ್ ಬಳಿಯ ಖಾಸಗಿ ಆಸ್ಪತ್ರೆ ಮುಂಭಾಗ ಕಾರಿನಲ್ಲಿ ಅವರ ಶವ ಪತ್ತೆಯಾಗಿದೆ. ಮನೆಯಿಂದ ಹೊರ ಬಂದಿದ್ದ ಅಶ್ವೀನ್ ಕುಮಾರ್, ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಲೊಕೇಷನ್ ಟ್ರ್ಯಾಕ್ ಮಾಡಿ ಕಾರು ಇರುವ ಸ್ಥಳಕ್ಕೆ ಬಂದ ಪೊಲೀಸರು, ಕಾರಿನ ಗ್ಲಾಸ್ ಒಡೆದು ನೋಡಿದಾಗ ಮೃತಪಟ್ಟಿರೋದು ದೃಢಪಟ್ಟಿದೆ.
ಅಶ್ವಿನ್ ಕುಮಾರ್ ಕೈ ಮೇಲೆ ಸುಟ್ಟುಗಾಯ ಇರುವ ಹಿನ್ನಲೆ, ಕುಟುಂಬಸ್ಥರಿಗೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.