ಮೊದಲೆರಡು ಪಂದ್ಯದಲ್ಲಿ ಆರ್ಭಟಿಸಿದ RCB, ನಂತರ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದೆ. ಅದರಲ್ಲೂ ತವರು ಬೆಂಗಳೂರಿನಲ್ಲೇ ಸತತ ನಾಲ್ಕು ಪಂದ್ಯ ಸೋತು ಭಾರೀ ಮುಖಭಂಗ ಅನುಭವಿಸಬೇಕು.
Bakrid: ಮುಸ್ಲಿಂ ಕಂಟ್ರಿಯಲ್ಲಿ ಕುರಿ ಬಲಿ ನಿಷೇಧ; ಬಕ್ರೀದ್ಗೆ ಬಲಿ ಕೊಡದಂತೆ ಜನರಲ್ಲಿ ಮನವಿ!
ವಾಸ್ತವವಾಗಿ ಆರ್ಸಿಬಿ ತನ್ನ ತವರಿನಲ್ಲಿ ಆಡಿದ ನಾಲ್ಕಕ್ಕೇ ನಾಲ್ಕು ಪಂದ್ಯಗಳಲ್ಲಿ ಸೋಲಿಗೆ ಕೊರಳೊಡ್ಡಿತು. ತಂಡದ ಈ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವೈಫಲ್ಯ ಹಾಗೂ ಕಳಪೆ ನಾಯಕತ್ವ ಕಾರಣ ಎನ್ನಬಹುದು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 148 ರನ್ ಕಲೆಹಾಕಲಷ್ಟೇ ಶಕ್ತವಾಯಿತು. 148 ರನ್ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
148 ರನ್ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆದರೆ ಈ ಅಲ್ಪ ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಆರಂಭ ಕಳಪೆಯಾಗಿತ್ತು. ತಂಡದ ನಾಯಕಿ ಮೆಗ್ ಲ್ಯಾನಿಂಗ್ 12 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಅವರ ಔಟಾದ ನಂತರ, ಶಫಾಲಿ ವರ್ಮಾ ಮತ್ತು ಜೆಸ್ ಜೊನಾಸ್ಸೆನ್ ಇನ್ನಿಂಗ್ಸ್ ಜವಾಬ್ದಾರಿಯನ್ನು ವಹಿಸಿಕೊಂಡು ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇಬ್ಬರೂ 146 ರನ್ಗಳ ಜೊತೆಯಾಟವನ್ನು ನೀಡಿದರು.
ಈ ಸಮಯದಲ್ಲಿ, ಶಫಾಲಿ ವರ್ಮಾ 43 ಎಸೆತಗಳಲ್ಲಿ 80 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿದ್ದವು. ಇತ್ತ ಜೆಸ್ ಜೊನಾಸ್ಸೆನ್ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 61 ರನ್ ಗಳಿಸಿದರು. ಆರ್ಸಿಬಿ ಪರ ರೇಣುಕಾ ಸಿಂಗ್ ಠಾಕೂರ್ ಏಕೈಕ ವಿಕೆಟ್ ಪಡೆದರು
ಇದಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ವಿಕೆಟ್ಗಳಿಗೆ 147 ರನ್ ಗಳಿಸಿತು. ಆರ್ಸಿಬಿ ಪರ ಎಲಿಸ್ ಪೆರ್ರಿ ಮತ್ತೊಮ್ಮೆ ಟ್ರಬಲ್ಶೂಟರ್ ಪಾತ್ರವನ್ನು ನಿರ್ವಹಿಸಿ 47 ಎಸೆತಗಳಲ್ಲಿ ಮೂರು ಸಿಕ್ಸರ್ಗಳು ಮತ್ತು ಅಷ್ಟೇ ಬೌಂಡರಿಗಳೊಂದಿಗೆ 60 ರನ್ ಗಳಿಸಿದರು. ಅವರಲ್ಲದೆ, ರಾಘವಿ ಬಿಶ್ತ್ 32 ಎಸೆತಗಳಲ್ಲಿ ಎರಡು ಸಿಕ್ಸರ್ಗಳ ಸಹಿತ 33 ರನ್ ಗಳಿಸಿದರು.
ಈ ಇನ್ನಿಂಗ್ಸ್ನೊಂದಿಗೆ, ಪೆರ್ರಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು. ಈ ಋತುವಿನಲ್ಲಿ ಅವರು ಆರು ಪಂದ್ಯಗಳಲ್ಲಿ 98.33 ಸರಾಸರಿಯಲ್ಲಿ 295 ರನ್ ಗಳಿಸಿದ್ದಾರೆ. ದೆಹಲಿ ಪರ ಶಿಖಾ ಪಾಂಡೆ ಮತ್ತು ಶ್ರೀ ಚರಣಿ ತಲಾ 28 ರನ್ಗಳಿಗೆ ತಲಾ ಎರಡು ವಿಕೆಟ್ ಪಡೆದರು. ಮರಿಜಾನ್ನೆ ಕಪ್ಪ್ ಒಂದು ವಿಕೆಟ್ ಪಡೆದರು.