ಬಕ್ರೀದ್ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ತಿಂಗಳ ಕೊನೆಯಲ್ಲಿ ಬರುವ ಈದ್-ಉಲ್-ಫಿತರ್ ನಂತರ ಸುಮಾರು ಎರಡು ತಿಂಗಳು ಕಳೆದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಾನುವಾರುಗಳನ್ನು ಬಲಿ ನೀಡುವ ಮೂಲಕ ಮುಸ್ಲಿಮರು ಬಕ್ರೀದ್ ಆಚರಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮೇಕೆ, ಕುರಿ, ಒಂಟೆ ಅಥವಾ ಹಸುಗಳನ್ನು ಬಲಿ ಕೊಡುತ್ತಾರೆ. ಬಕ್ರೀದ್ ಹಬ್ಬವನ್ನು ಬಕ್ರಿ ಈದ್, ಈದ್ ಕುರ್ಬಾನ್, ಈದ್ ಅಲ್-ಅಧಾ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ.
ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ವಾಹನ ಸೀಜ್! ರಾಜಧಾನಿಯಲ್ಲಿ ಹೊಸ ರೂಲ್ಸ್!
ಕುರಿಗಳನ್ನು ಕಡಿಯುವ ವಿಶೇಷ ಬಕ್ರೀದ್ ಹಬ್ಬವು ಮುಸ್ಲಿಮರಿಗೆ ವಿಶೇಷ ಹಬ್ಬ. ಆದರೆ ಮುಸ್ಲಿಂ ರಾಷ್ಟ್ರದಲ್ಲೇ ಕುರಿ ಬಲಿ ನಿಷೇಧ ಮಾಡಲಾಗಿದೆ
ಜೂನ್ ತಿಂಗಳಲ್ಲಿ ಬರುವ ಬಕ್ರೀದ್ ಹಬ್ಬದಲ್ಲಿ ಮುಸ್ಲಿಮರು ಕುರಿ ಅಥವಾ ಮೇಕೆಯನ್ನು ಬಲಿ ಕೊಡುವ ಮೂಲಕ ಹಜ್ಜ್ ಯಾತ್ರೆಯನ್ನು ನೆನಪಿಸಿಕೊಳ್ಳುತ್ತಾರೆ. ಬಲಿ ಕೊಟ್ಟ ಮಾಂಸವನ್ನು ಮನೆಯಲ್ಲೂ ಬಳಸುತ್ತಾರೆ, ಬಡವರಿಗೂ ಹಂಚುತ್ತಾರೆ. ಆದರೆ ಈಗ ಸದ್ಯ ಮೊರಾಕೊದಲ್ಲಿ ಜನರ ಖರೀದಿ ಶಕ್ತಿ ಕಡಿಮೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಿರಂತರ ಬರಗಾಲ ಎದುರಿಸುತ್ತಿರುವುದರಿಂದ ವಿಶೇಷವಾಗಿ ಉತ್ತರ ಆಫ್ರಿಕಾದ ಅನೇಕ ಭಾಗಗಳಲ್ಲಿ ಕುರಿ ಬಲಿ ಬೇಡ ಎಂದು ರಾಜ ಕೇಳಿಕೊಂಡಿದ್ದಾರೆ.
ಆದರೆ ಕಳೆದ 9 ವರ್ಷಗಳಿಂದ ಬಂದ ಬರಗಾಲದಿಂದಾಗಿ ಮೊರಾಕೊದಲ್ಲಿ ಕುರಿ, ಜಾನುವಾರುಗಳ ಸಂಖ್ಯೆ 38% ಕಡಿಮೆಯಾಗಿದೆ. “ನಮ್ಮ ದೇಶ ಈಗ ಬರಗಾಲ ಮತ್ತು ಆರ್ಥಿಕ ಸಂಕಷ್ಟ ಎರಡನ್ನೂ ಎದುರಿಸುತ್ತಿದೆ. ಇದರಿಂದ ಜಾನುವಾರುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ” ಎಂದು ರಾಜ ಮೊಹಮ್ಮದ್ ಹೇಳಿದ್ದಾರೆ.
ಈ ಧಾರ್ಮಿಕ ವಿಧಿಯನ್ನ ಉತ್ತಮ ಪರಿಸ್ಥಿತಿಗಳಲ್ಲಿ ಪೂರೈಸಲು ನಿಮಗೆ ಅನುವು ಮಾಡಿಕೊಡುವುದರ ಜೊತೆಗೆ ನಮ್ಮ ದೇಶ ಎದುರಿಸುತ್ತಿರುವ ಹವಾಮಾನ ಮತ್ತು ಆರ್ಥಿಕ ಸವಾಲುಗಳನ್ನು ಪರಿಗಣಿಸಬೇಕಿದೆ. ಇದರಿಂದಾಗಿ ಜಾನುವಾರುಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗಿರುವುದರಿಂದ ಕುರಿ ಬಲಿ ಬೇಡ ಎಂದು ಮನವಿ ಮಾಡ್ತಿದ್ದೇವೆ” ಎಂದು ರಾಜನ ಪರವಾಗಿ ಧಾರ್ಮಿಕ ವ್ಯವಹಾರಗಳ ಸಚಿವ ಅಹ್ಮದ್ ತೌಫಿಕ್ ತಿಳಿಸಿದ್ದಾರೆ.