ಡಬ್ಲ್ಯುಪಿಎಲ್ 2025 ರಲ್ಲಿ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಆರ್ ಸಿಬಿ ಗೆಲ್ಲಲೇಬೇಕಾಗಿದೆ.
World Civil Defence Day: ಇಂದು ವಿಶ್ವ ನಾಗರಿಕ ರಕ್ಷಣಾ ದಿನ ಆಚರಣೆ ಏಕೆ..? ಹಿನ್ನಲೆ ಬಗ್ಗೆ ಮಾಹಿತಿ ಇಲ್ಲಿದೆ
ಇಂದು ಪ್ರಬಲ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿ ಬೆಂಗಳೂರಿನಲ್ಲಿ ಕೊನೆಯ ಪಂದ್ಯವಾಡಲಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ 2025 ರ ಪಂದ್ಯ ಅಂತ್ಯವಾಗಲಿದೆ. ತವರಿನಲ್ಲಿ ಆರ್ ಸಿಬಿ ಒಂದೇ ಒಂದು ಪಂದ್ಯ ಗೆಲ್ಲದೇ ನಿರಾಸೆಗೊಂಡಿರುವ ಅಭಿಮಾನಿಗಳ ಮನರಂಜಿಸಲು ಆರ್ ಸಿಬಿ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು WPL 2025ರ ಪಂದ್ಯದಲ್ಲಿ ಆರಂಭದಲ್ಲಿ ಅಬ್ಬರಿಸಿ ಬಳಿಕ ಹ್ಯಾಟ್ರಿಕ್ ಸೋಲಿವತ್ತ ಹೆಜ್ಜೆ ಹಾಕಿದೆ. ಹೀಗಾಗಿ ಮೂರು ಸೋಲುಗಳೊಂದಿಗೆ ಆರ್ಸಿಬಿ ತಂಡದ ಪ್ಲೇಆಫ್ ಹಾದಿ ಕೂಡ ತುಸು ಕಠಿಣವಾಗಿದೆ.
ಅಂದರೆ ಆರ್ಸಿಬಿ ತಂಡಕ್ಕೆ ಇನ್ನುಳಿದಿರುವುದು ಕೇವಲ ಮೂರು ಮ್ಯಾಚ್ಗಳು ಮಾತ್ರ. ಈ ಮೂರು ಪಂದ್ಯಗಳಲ್ಲೂ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಬಹುದು. ಇಲ್ಲದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇತರೆ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.
ಆರ್ಸಿಬಿ ತಂಡವು ಮುಂದಿನ ಮೂರು ಮ್ಯಾಚ್ಗಳಲ್ಲಿ, ಅಂದರೆ ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಜಯ ಸಾಧಿಸಿದರೆ ಒಟ್ಟು 10 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಬಹುದು.
ಒಂದು ವೇಳೆ ಆರ್ಸಿಬಿ ತಂಡವು ಕೊನೆಯ ಮೂರು ಪಂದ್ಯಗಳಲ್ಲಿ 2 ಗೆಲುವು ಮಾತ್ರ ಸಾಧಿಸಿದರೆ, ಒಟ್ಟು 8 ಅಂಕಗಳೊಂದಿಗೆ ಪ್ಲೇಆಫ್ ರೇಸ್ನಲ್ಲೇ ಉಳಿಯಲಿದೆ. ಆದರೆ ಇಲ್ಲಿ ನೆಟ್ ರನ್ ರೇಟ್ ಕೂಡ ಗಣನೆಗೆ ಬರುತ್ತದೆ. ಹೀಗಾಗಿ ಆರ್ಸಿಬಿ ಮುಂದಿನ ಪಂದ್ಯಗಳ ಮೂಲಕ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವತ್ತ ಕೂಡ ಗಮನಹರಿಸಬೇಕಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಮೂರು ಲೀಗ್ ಹಂತದ ಪಂದ್ಯಗಳಲ್ಲಿ ಒಂದು ಜಯ ಮಾತ್ರ ಸಾಧಿಸಿದರೆ, ಪ್ಲೇಆಫ್ಗೆ ಅರ್ಹತೆ ಪಡೆಯಲು ಇತರೆ ತಂಡಗಳ ಫಲಿತಾಂಶಗಳನ್ನು ಅವಲಂಭಿಸಬೇಕಾಗುತ್ತದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಲಿದೆ.