ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ಗುರು ವೈಭವೋತ್ಸವ ನಡೆಯುತ್ತಿದೆ. ಶ್ರೀ ಮಠದಲ್ಲಿ ಗುರು ವೈಭವೋತ್ಸವ ಕಾರ್ಯಕ್ರಮ ಅಂಗವಾಗಿ ರಾಯರ 404 ನೇ ಪಟ್ಟಾಭಿಷೇಕ ಹಾಗೂ 430 ನೇ ವರ್ದಂತಿ ಉತ್ಸವ ನಡೆಯಿತು.
ಇಂದು ಶ್ರೀ ಮಠದಲ್ಲಿ 404 ನೇ ವರ್ಷ ಪಟ್ಟಾಭಿಷೇಕ ನೆರವೇರಿದ್ದು, ರಾಯರ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ರಾಯರ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನೆರವೇರಿತು. ಇನ್ನೂ ರಾಯರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಆಂಧ್ರಪ್ರದೇಶದ ಸಚಿವರಾದ ನಾರಾ ಲೋಕೇಶ್ ಭಾಗಿಯಾಗಿದ್ದರು. ಮೂಲ ರಾಮದೇವರ ಪೂಜೆ,ರಾಯರ ಮೂಲ ವೃಂದಾವನಕ್ಕೆ ಅಭಿಷೇಕ ಸಲ್ಲಿಸಿದರು. ಇನ್ನೂ ಮಾರ್ಚ್6 ರಂದು ರಾಯರ 430 ನೇ ವರ್ದಂತಿ ಮಹೋತ್ಸವ ನೆರವೇರಲಿದೆ.