ಹುಬ್ಬಳ್ಳಿ: ಕ್ರಾಂತಿವೀರ ಬ್ರಿಗೇಡ್ ಸಭೆಯನ್ನ ನಡೆಸಿದ್ದು,,ಈ ಸಭೆಯಲ್ಲಿ ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಕುರಿತು ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿ ಸಂಘಟನೆಯ ದೃಷ್ಟಿಯಿಂದ ಅನೇಕ ಸಲಹೆ ಸೂಚನೆಗಳನ್ನು ಕೊಟ್ಟಿದ್ದು, ನಾಡಿನ ಹಿಂದು ಸಮಾಜ ಒಂದಾಗಬೇಕು ಹಾಗೂ ಸಮಗ್ರವಾದ ಹಿಂದು ಸಮಾಜ ಅಳಿವು ಉಳಿವಿಗೆ ಮುಂದಿನ ಹೋರಾಟ ನಡೆಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಕ್ರಾಂತಿವೀರ ಬ್ರಿಗೇಡ್ ಸಂಘಟನೆ ಸಂಸ್ಥಾಪಕರಾದ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, ರಾಜ್ಯದ ವಿವಿಧ ಕಡೆಗಳಲ್ಲಿ ಸಂಘಟನೆ ಮಾಡುವ ದೃಷ್ಟಿಯಿಂದ ತಿರುಗಾಡಿ ಹೋರಾಟ ನಡೆಸಲಾಗುವುದು. ಈಗಾಗಲೇ ಸಾಕಷ್ಟು ಹಿಂದು ಸಮಾಜದ ಮೇಲೆ ಅನ್ಯಾಯ ಆಗತಾ ಇದೆ ಆದ್ದರಿಂದ ಸಾವಿರಾರು ಸಾಧು ಸಂತರು ಈ ಕ್ರಾಂತಿವೀರ ಬ್ರಿಗೇಡ್ ಜೊತೆಗೆ ಹಮ್ಮಿಕೊಳ್ಳಲಾಗಿದೆ ಎಂದರು.