ಬೆಂಗಳೂರು: ಬಿಜೆಪಿ ಅವರಿಗೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ವೋಟ್ ಮಾತ್ರ ಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸ್ಪೀಕರ್ಗೆ ಗ್ರೇಟರ್ ಬೆಂಗಳೂರು ವರದಿಯನ್ನು ರಿಜ್ವಾನ್ ಅರ್ಷದ್ ಸಮಿತಿ ಕೊಟ್ಟಿದ್ದಾರೆ.
ಬಿಲ್ ಬಗ್ಗೆ ಸದನದಲ್ಲಿ ಚರ್ಚೆ ಆಗಲಿದೆ. ಬಿಜೆಪಿ ಅವರಿಗೆ ಬೆಂಗಳೂರು ಅಭಿವೃದ್ಧಿ ಬೇಕಿಲ್ಲ. ವೋಟ್ ಮಾತ್ರ ಬೇಕು. ಹೀಗಾಗಿ ಗ್ರೇಟರ್ ಬೆಂಗಳೂರು ವಿಧೇಯಕ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
March 1st New Rules: ಗ್ರಾಹಕರೇ ಗಮನಿಸಿ.. ಇಂದಿನಿಂದ ಬದಲಾಗಲಿವೆ ಈ ನಿಯಮಗಳು..!
ಮೇ ತಿಂಗಳಲ್ಲಿ 100% ಬಿಬಿಎಂಪಿ ಚುನಾವಣೆ ಆಗಲಿದೆ. ಗ್ರೇಟರ್ ಬೆಂಗಳೂರು ಆದರೆ ವಾರ್ಡ್ ಜಾಸ್ತಿ ಆಗಬಹುದು. 2-3 ಪಾಲಿಕೆ ಆಗಬಹುದು. ಈಗಿನ ಬೆಂಗಳೂರನ್ನ ಒಬ್ಬ ಮೇಯರ್, ಕಮಿಷನರ್ ಆಡಳಿತ ಮಾಡಲು ಸಾಧ್ಯವಿಲ್ಲ. ನನ್ನ ಪ್ರಕಾರ ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ 2-3 ಪಾಲಿಕೆ ಆಗಬೇಕು ಎಂದು ಹೇಳಿದ್ದಾರೆ.