ಚಾಮರಾಜನಗರ : ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮಲೆ ಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀಯವರ ನೇತೃತ್ವದಲ್ಲಿ ಮಹಾರಥೋತ್ಸವು ವಿಜೃಂಭಣೆಯಿಂದ ಜರುಗಿತು .
ಮಹಾರಥವನ್ನು ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತು, ದೇಗುಲವನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗಿನ ಜಾವ ಮಾದಪ್ಪ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿನಲಾಯಿತು. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಬೆಳಗಿನ ಜಾವ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆ ನೆರವೇರಿಸಲಾಯಿತು.
ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಛತ್ರಿ, ಚಾಮರ, ವಾದ್ಯ ಮೇಳದೊಂದಿಗೆ ದೇಗುಲ ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯ ಮೂಲಕ ಉತ್ಸವ ಮೂರ್ತಿಯನ್ನು ಮಹಾರಥೋತ್ಸವವಕ್ಕೆ ತರಲಾಯಿತು. ನಂತರ ಮಾದಪ್ಪನಿಗೆ ಸಂಕಲ್ಪಮಾಡಿ, ಅಷ್ಟೋತ್ತರ. ಬಿಲ್ವಾರ್ಚನೆ, ದೋಪ ದೀಪ ನೈವೇದ್ಯ ಮಹಾಮಂಗಳಾರತಿ ನೆರವೇರಿಸಿದರು.