ಧಾರವಾಡ : ಕಲಘಟಗಿ ತಾಲೂಕಿನ ದುಮ್ಮವಾಡ ರೈತ ಸಂಪರ್ಕ ಕೇಂದ್ರದಲ್ಲಿ ನಕಲಿ ಪೈಪ್ ನಾದಲ್ ಕೊಟ್ಟು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯ ಮುಂದಿದ್ದ ನಾಯಿಯ ಹೊತ್ತೊಯ್ದ ಚಿರತೆ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರೈತ ಸಂಪರ್ಕ ಕಚೇರಿಯಲ್ಲಿ ಶಿಗಿಗಟ್ಟಿ ಗ್ರಾಮದ ರೈತ ರಾಜು ಭೀಮಪ್ಪ ಲಮಾಣಿ ಎಂಬುವರು ವಿಘ್ನೇಶ್ವರ ಕಂಪನಿಯ ನಾದಲ್ ಪೈಪ್ ಗಾಗಿ ಆನ್ ಲೈನ್ ಮೂಲಕ ಅರ್ಜಿ ಹಾಕಿದ್ದರು. ಆದರೆ ರೈತ ಸಂಪರ್ಕ ಕಚೇರಿಯಲ್ಲಿ ಕೆಲಸ ಮಾಡುವ ರೇವಣ್ಣ ಎಂಬುವರು ರೈತರಿಗೆ ವಿಘ್ನೇಶ್ವರ ಕಂಪನಿ ನಾದಲ್ ಪೈಪ್ ಕೊಡದೇ ಬೇರೆ ಕಂಪನಿ ಪೈಪ್ ನಾದಲ್ ಕೊಟ್ಟಿದ್ದಾರೆ. ಇದು ರೈತರಿಗೆ ಗೊತ್ತಾಗಿ ನಮ್ಮ ಕಡೆ ವಿಘ್ನೇಶ್ವರ ಕಂಪನಿ ನಾದಲ್ ಪೈಪ್ ಕೊಡುತ್ತೇವೆ ಅಂತಾ ಹೇಳಿ ವಿಘ್ನೇಶ್ವರ ಕಂಪನಿ ಹಣ ವರ್ಗಾವಣೆ ಮಾಡಿಸಿಕೊಂಡು ಈಗ ಡೂಪ್ಲಿಕೇಟ್ ಪೈಪ್ ಕೊಟ್ಟಿದಿರಾ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಕೃಷಿ ಅಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.