ಚಿಕ್ಕೋಡಿ : ಮರಾಠಿ ಮಾತನಾಡಿಲ್ಲ ಎಂದು ಬೆಳಗಾವಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ವಿಚಾರ ಇನ್ನೂ ತಣ್ಣಗಾಗುವ ಮೊದಲೇ ಅಥಣಿಯಲ್ಲಿ ಅಂತದ್ದೇ ಘಟನೆ ನಡೆದಿದೆ. ಬೈಕ್ ಗೆ ದಾರಿ ನೀಡಿಲ್ಲ ಎಂಬ ವಿಚಾರಕ್ಕೆ ಬಸ್ ವಾಹಕರ ಮೇಲೆ ರಾಡ್ ನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಅಥಣಿ ತಾಲೂಕಿನ ಹುಲಗಬಾಳಿ ಕ್ರಾಸ್ ಬಳಿ ನಡೆದಿದೆ.
ಹೊಟ್ಟೆ ಉರಿಯಿಂದಲೇ ಸರ್ಕಾರ ಬೀಳುತ್ತೆ ಎಂಬ ಅಪಪ್ರಚಾರ ; ಸೌಮ್ಯಾ ರೆಡ್ಡಿ ಕಿಡಿ
ಅಥಣಿ ಘಟಕದಿಂದ ಸಪ್ತಸಾಗರ ಗ್ರಾಮಕ್ಕೆ ಸಂಚರಿಸುವ ಸರ್ಕಾರಿ ಬಸ್ ಹುಲಗಬಾಳಿ ಕ್ರಾಸ್ ಬಳಿ ಬೈಕ್ ಸವಾರನಿಗೆ ಹಾರ್ನ್ ಮಾಡಿದರು ದಾರಿ ನೀಡಿಲ್ಲ ಎಂಬ ವಿಚಾರಕ್ಕೆ ಇಬ್ಬರ ಮದ್ಯಾ ವಾಗ್ವಾದ ಶುರುವಾಗಿದೆ. ಇಬ್ಬರು ಅಸ್ಲಿಲವಾಗಿ ಬೈಯುತ್ತ ಗಲಾಟೆ ಶುರುವಾಗಿದೆ ಇಬ್ಬರು ಒಬ್ಬರೋಗೊಬ್ಬರು ಹೊಡೆದಡಿಕೊಂಡಿದ್ದಾರೆ ಅಷ್ಟರಲ್ಲೇ ಬೈಕ್ ಸವಾರ ಅಲ್ಲೇ ಬಿದ್ದ ರಾಡ್ ನಿಂದ ಹಲ್ಲೆಗೆ ಯತ್ನಿಸಿದ್ದಾನೆ ನಂತರ ಸ್ಥಳೀಯರ ಸಹಾಯದಿಂದ ಇಬ್ಬರಿಗೂ ಬುದ್ದಿ ಹೆಳಿ ಗಲಾಟೆ ತಿಳಿಗೊಳಿಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.