ಶಿರಸಿ:- ಲಂಚ ಸ್ವೀಕರಿಸುತ್ತಿದ್ದ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ ಲೋಕಾ ಬಲೆಗೆ ಬಿದ್ದಿದ್ದಾರೆ.
ಮಧುಮೇಹಿಗಳ ಗಮನಕ್ಕೆ: ಈ ಮೀನು ಶುಗರ್ಗೆ ರಾಮಬಾಣ! ಡಯಾಬಿಟಿಸ್ ಕಂಟ್ರೋಲ್ಗೆ ಹೀಗೆ ಮಾಡಿ!
ಪ್ರಕರಣವೊಂದರ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಿಡಿದಿದ್ದಾರೆ. ಸೀಜ್ ಆಗಿದ್ದ ಮುದ್ದೆ ಮಾಲನ್ನು ರಿಲೀಸ್ ಮಾಡಿಸಲು ಪವನ್ ಕುಮಾರ್ ಅವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಫೆಬ್ರವರಿ 28, ಪವನ್ ಕುಮಾರ್ ಅವರಿಂದ 6 ಸಾವಿರ ರೂ. ಲಂಚದ ಹಣ ಪಡೆಯುತ್ತಿರುವಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ದಾಳಿ ಮಾಡಿ ಹಿಡಿದಿದ್ದಾರೆ. ಸದ್ಯ ಎಪಿಪಿ ಪ್ರಕಾಶ್ ಲಾಮಾಣಿ ಅವರನ್ಜು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.