ಗದಗ: ಗದಗ ಬೆಟಗೇರಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ತೆಕ್ಕೆಗೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ನ 16 ನೇ ವಾರ್ಡ್ ಸದಸ್ಯ ಕೃಷ್ಣಾ ಪರಾಪುರ್ ಅಧ್ಯಕ್ಷರಾಗಿ ಮತ್ತು 4ನೇ ವಾರ್ಡ್ ಸದಸ್ಯೆ ಶಕುಂತಲಾ ಅಕ್ಕಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
17 ಸದಸ್ಯರ ಬಲ ಹಾಗೂ ಓರ್ವ ಶಾಸಕರ ಮತದಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 35 ಸಂಖ್ಯಾಬಲದ ನಗರಸಭೆಯಲ್ಲಿ ಬಿಜೆಪಿ 18 ಸದಸ್ಯರನ್ನ ಹೊಂದಿದೆ. ಆದರೆ ಗುರುವಾರ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರನ್ನ ಅನರ್ಹಗೊಳಿಸಿ ಆದೇಶ ನೀಡಿದ್ದರು.
ಹೀಗಾಗಿ ಇಂದು 15 ಸದಸ್ಯರ ಜೊತೆಗೆ ಚುನಾವಣೆಯಲ್ಲಿ ಭಾಗಿಯಾಗಿದ್ದ ಸಂಸದ ಬಸವರಾಜ್ ಬೊಮ್ಮಾಯಿ ಅವರು ಪ್ರಕ್ರಿಯೆ ಮಧ್ಯೆ ಚುನಾವಣೆ ಬಹಿಷ್ಕರಿಸಿ ಆಚೆ ಬಂದಿದ್ದರು. ಬೊಮ್ಮಾಯಿ, ಸದಸ್ಯರ ಆಚೆ ಬರುತ್ತಿದ್ದಂತೆ ಪೂರ್ಣಗೊಂಡ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಅಯ್ಕೆಯಾಗಿದೆ. ಚುನಾವಣೆ ಪ್ರಕ್ರಿಯೆ ತಡೆಯಾಜ್ಞೆ ಮಧ್ಯೆ ಚುನಾವಣೆ ನಡೆದಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.