ಬೆಂಗಳೂರು: ಬೆಂಗಳೂರು ತಿಲಕ್ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಉತ್ತರ ಪ್ರದೇಶ ಮೂಲದ ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದಾರೆ. ತಂಜಿಮ್ ಹಾಗೂ ಸದ್ದಾಂ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳು ನಾಗರಾಜು ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು.
ಕಳ್ಳತನ ಮಾಡಿದ ಬೈಕ್ ನ್ನ ಮನೆಗಳ ಕಳ್ಳತನಕ್ಕೆ ಬಳಸುತ್ತಿದ್ದರು. ಕಬ್ಬಿಣದ ರಾಡ್ ನಿಂದಾ ಬಾಗಿಲನ್ನು ಮೀಟಿ ಕಳ್ಳತನ ಮಾಡುತ್ತಿದ್ದರು. ಪೊಲೀಸರು ಆರೋಪಿಗಳ ಬಂಧನಕ್ಕಾಗಿ 3 ಸಾವಿರ ಸಿಸಿಟಿವಿ ಪರಿಶೀಲನೆ ಮಾಡಿದ್ದರು.
Indian Farming: ಕೃಷಿ ಕ್ಷೇತ್ರಕ್ಕೆ AI ಟೆಕ್ನಾಲಜಿ: ಉದಾಹರಣೆ ಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾಡೆಲ್ಲ!
ಕೊನೆಗೂ ಯುಪಿ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಕದ್ದ ಚಿನ್ನ ಮಾರಿ ರಮ್ಮಿ ಸರ್ಕಲ್ ಆಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಸದ್ಯ ಬಂಧಿತ ಆರೋಪಿಗಳಿಂದ 186 ಗ್ರಾಂ ಚಿನ್ನ ಹಾಗೂ 15 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.