ಖ್ಯಾತ ನಟಿಯರಾದ ಕಾಜಲ್ ಹಾಗೂ ತಮನ್ನಾ ಭಾಟಿಯಾಗೆ ಪೊಲೀಸರು ನೊಟೀಸ್ ನೀಡಿದ್ದಾರೆ. ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್ ವಿಷಯದಲ್ಲಿ ನಟಿಯರಾದ ತಮನ್ನಾ ಭಾಟಿಯಾ ಮತ್ತು ನಟಿ ಕಾಜಲ್ ಅಗರ್ವಾಲ್ ಅವರುಗಳು ಸಂಕಷ್ಟಕ್ಕೆ ಸಿಲುಕಿದ್ದು ಇದೀಗ ಇಬ್ಬರಿಗೂ ಪೊಲೀಸರು ನೊಟೀಸ್ ನೀಡಿದ್ದಾರೆ.
2.40 ಕೋಟಿ ವಂಚನೆ ಪ್ರಕರಣದಲ್ಲಿ ನೀಡಲಾಗಿರುವ ದೂರಿನಲ್ಲಿ ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ. ಪದುಚೆರಿ ಪೊಲೀಸ್ ಠಾಣೆಯಲ್ಲಿ ವಂಚಕರ ಜೊತೆಗೆ ತಮನ್ನಾ ಹಾಗೂ ಕಾಜಲ್ ವಿರುದ್ಧವೂ ಸಂತ್ರಸ್ತರು ದೂರು ನೀಡಿದ್ದು, ಇಬ್ಬರು ಮುಖ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೀಗ ತಮನ್ನಾ ಭಾಟಿಯಾ ಮತ್ತು ಕಾಜಲ್ ಅಗರ್ವಾಲ್ ಅವರುಗಳ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಮಾಡಿದ್ದಾರೆ.
2020 ರಲ್ಲಿ ಕ್ರಿಸ್ಟೊ ಕರೆನ್ಸಿ ಕಂಪೆನಿ ಹೆಸರಿನ ಕಂಪೆನಿಯನ್ನು ಕೊಯಂಬತ್ತೂರಿನಲ್ಲಿ ಸ್ಥಾಪಿಸಲಾಯ್ತು. ಅದ್ಧೂರಿಯಾಗಿ ನಡೆದ ಈ ಕಂಪೆನಿಯ ಉದ್ಘಾಟನೆಗೆ ನಟಿ ತಮನ್ನಾ ಭಾಟಿಯಾ ಅತಿಥಿಯಾಗಿ ಆಗಮಿಸಿದ್ದರು. ಆ ನಂತರ ಕಂಪೆನಿಯ ವಾರ್ಷಿಕ ಮಹೋತ್ಸವವನ್ನು ಮಹಬಲಿಪುರಂನ ಐಶಾರಾಮಿ ಹೋಟೆಲ್ನಲ್ಲಿ ಮಾಡಲಾಗಿದೆ ಆ ಕಾರ್ಯಕ್ರಮಕ್ಕೆ ನಟಿ ಕಾಜಲ್ ಅಗರ್ವಾಲ್ ಆಗಮಿಸಿದ್ದರು. ಆದರೆ ಇದೀಗ ಈ ಕಂಪೆನಿ ವಿರುದ್ಧ, ಹೂಡಿಕೆದಾರರು ದೂರು ದಾಖಲಿಸಿದ್ದು, ಕಂಪೆನಿಯು ತಮಗೆ 2.40 ಕೋಟಿ ವಂಚನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ನಿವೃತ್ತಿ ಸರ್ಕಾರಿ ನೌಕರ ಅಶೋಕ್ ಎಂಬುವರು ಪುದುಚೆರಿ ಪೊಲೀಸರಿಗೆ ನೀಡಿರುವ ದೂರಿನನ್ವಯ ಕ್ರಿಸ್ಟೊ ಕರೆನ್ಸಿ ಕಂಪೆನಿ ತಮ್ಮ ಹಾಗೂ ತಮ್ಮ ಹತ್ತಿರದ ಸುಮಾರು 10 ಜನರಿಂದ ಭಾರಿ ಮೊತ್ತದ ಹಣ ಹೂಡಿಕೆ ಮಾಡಿಕೊಂಡಿದ್ದು, ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಇದೀಗ ವಂಚನೆ ಎಸಗಿದೆ. ಸುಮಾರು 2.40 ಕೋಟಿ ರೂಪಾಯಿ ಹಣವನ್ನು ಕಂಪೆನಿ ತಮಗೆ ಮೋಸ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ಮುಖ್ಯ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.