ವಿಜಯನಗರ: ಡಿ.ಕೆ.ಶಿವಕುಮಾರ್ ರಕ್ತದಲ್ಲೇ ಕಾಂಗ್ರೆಸ್ ಇದೆ ಎಂದು ಡಿಸಿಎಂ ಡಿಕೆಶಿ ಪರ ಸಚಿವ ಜಮೀರ್ ಅಹ್ಮದ್ ಬ್ಯಾಟ್ ಬೀಸಿದ್ದಾರೆ. ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಮಾತನಾಡಿದ ಅವರು, ಶಿವರಾತ್ರಿ ಹಬ್ಬಕ್ಕೆ ಸ್ವಾಮೀಜಿ ಆಹ್ವಾನ ಮಾಡಿದ್ದರು. ಅಮಿತ್ ಶಾ ಕೂಡಾ ಬಂದಿದ್ದರು. ಡಿ.ಕೆ ಬಿಜೆಪಿಗೆ ಹೋಗ್ತಾರೆ ಅನ್ನೋದು ರಾಜಕೀಯ ಉಹಾಪೋಹ ಸುದ್ದಿಗಳು. ಡಿ.ಕೆ ಶಿವಕುಮಾರ್ ರಕ್ತದಲ್ಲಿಯೇ ಕಾಂಗ್ರೆಸ್ ಇದೆ. ಅವರು ಪಕ್ಕಾ ಕಾಂಗ್ರೆಸ್ ಮನುಷ್ಯ ಎಂದು ಡಿಕೆಶಿ ಪರವಾಗಿ ಮಾತನಾಡಿದರು.
ಇನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ ಈಗಾಗಲೇ ರಾಜ್ಯದಲ್ಲಿ ಅಧ್ಯಕ್ಷರು ಇದ್ದಾರೆ. ಹೈಕಮಾಂಡ್ ಹಾಕಿರೋ ಗೆರೆ ನಾವು ದಾಟಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ. ಡಿ.ಕೆ ಶಿವಕುಮಾರ್ ಚೆನ್ನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕ್ಷೀಪ್ರ ರಾಜಕೀಯ ಕ್ರಾಂತಿಯಾಗುತ್ತೆ ಅನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಇನ್ನು ಹದಿನೈದು ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ. ಮುಂದೆ ಕೂಡಾ ಕಾಂಗ್ರೆಸ್ ಸರ್ಕಾರವೇ ಬರಲಿದೆ. ಬಿಜೆಪಿಯಲ್ಲಿಯೇ ಅನೇಕ ಬಣಗಳಾಗಿವೆ. ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಜೆಡಿಎಸ್ ಶಾಸಕರು ನಮ್ಮ ಸಂಪರ್ಕದಲ್ಲಿಯೂ ದಲ್ಲಿದ್ದಾರೆ. ಸುಮಾರು 13 ರಿಂದ 14 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.