ಬಾಗಲಕೋಟೆ : ದೇವರ ಮೇಲೆ ಅನನ್ಯ ಭಕ್ತಿ ಇದ್ದರೆ ಮಾತ್ರ ಕಷ್ಟ ಕಾರ್ಪಣ್ಯದಿಂದ ಮುಕ್ತಿ ದೊರೆಯುತ್ತದೆ ಎಂದು ಹಳೇ ಹುಬ್ಬಳ್ಳಿಯ ಶ್ರೀ ವೀರಭಿಕ್ಷಾವರ್ತಿ ಮಠದ ಜಗದ್ಗುರು ಶ್ರೀ ಯೋಗಾಚಾರ್ಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಮಠದಲ್ಲಿ ಶಿವರಾತ್ರಿ ಜಾತ್ರೆಯ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಬಂದು ಬಾಂಧವರು ಕೈ ಬಿಟ್ಟರು ದೇವರು ಮತ್ತು ಗುರು ಎಂದಿಗೂ ಕೈ ಬಿಡಲಾರರ. ಕಳೆದ 15 ದಿನಗಳಿಂದ ಲಿಂಗೈಕ್ಯ ಶಂಕರ ಶಿವಾಚಾರ್ಯರ ಜೀವನ ಚರಿತ್ರೆಯ ಪ್ರವಚನವನ್ನು ಕೇಳಿ ಧನ್ಯರಾಗಿದ್ದಿರಿ ಇಂತಹ ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದ ಹಾದಿ ಹಿಡಿಯಬೇಕು. ಧರ್ಮ ಮತ್ತು ಭಕ್ತಿ ಮಾರ್ಗದಲ್ಲಿ ನಡೆದರೆ ಜಯ ನಿಶ್ಚಿತ ದೇವರಲ್ಲಿ ಶ್ರದ್ದಾಪೂರ್ವ ಭಕ್ತಿ ಇರಬೇಕು. ಸ್ವಚ್ಚತೆ, ಶಿಸ್ತು, ಆರೋಗ್ಯ ಪೂರ್ಣ ಜೀವನ ಶ್ರೇಷ್ಟವಾದದ್ದು ಎಂದು ಹೇಳಿದರು.
ಮಾ.2ರಿಂದ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ 1,500 ನಾಟಿ ವೈದ್ಯರು ಭಾಗಿ– ಸಚಿವ ಖಂಡ್ರೆ
ನಂತರ ಸಾನಿಧ್ಯ ವಹಿಸಿದ ಗುಣದಾಳದ ಡಾ ವಿವೇಕಾನಂದ ದೇವರು ಮಾತನಾಡಿ ಆಧ್ಯಾತ್ಮಕ್ಕೆ ಅಪಾರ ಶಕ್ತಿ ಇದೆ. ಸದಾ ನಾವೂ ದೇವರ ನಾಮ ಸ್ಮರಣೆ ಮಾಡುವ ಮೂಲಕ ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದರು. ಪ್ರವಚನ ಪಟು ಶ್ರೀಶೈಲಯ್ಯ ಹಿರೇಮಠ ಶ್ರೀಗಳು ಮಾತನಾಡಿದರು. ಈ ಸಂದರ್ಭದಲ್ಲಿ ಬಸಯ್ಯ ಹಿರೇಮಠ ಹಿರಿಯರಾದ ಬಸಪ್ಪ ಎಂಟೇತ್ತಿನವರ, ಮಹಾದೇವಪ್ಪ ಹಳ್ಳಿಸುಭಾಸ ಕಂಪು, ಶಿವನಪ್ಪ ಹಳ್ಳಿ.ಚಿನ್ನಪ್ಪ ಸಂಗಾನಟ್ಟಿ, ಮಂಜುನಾಥ ಕಂಪು ದಾನಪ್ಪ ಅಸಂಗಿ, ಆನಂದ ಕಂಪು, ಸಿದ್ದು ಸಣಪೇಟಿ ಶ್ರೀಶೈಲ ಹಳ್ಳಿ, ಮಲ್ಲಪ್ಪ ಸಂಗಾನಟ್ಟಿ, ಎಂ ಆರ್ ವಾಲಿ, ಈರಪ್ಪ ವಾಲಿ, ಮಹೇಶ ಚಿಚಖಂಡಿ, ಮಹಾಂತೇಶ ಮನ್ಮಿ, ಬಸವರಾಜ ಗಣಿ, ಸಿದ್ದು ಕಂಚು, ರಾಜು ಕದಂ, ಈರಪ್ಪ ಕಡಕಬಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.