ಬೆಂಗಳೂರು: ಸಂಪಿಗೆಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ನೇಪಾಳಿ ಮೂಲದ ಮೂವರು ಮನೆಗಳ್ಳರನ್ನು ಬಂಧಿಸಿದ್ದಾರೆ. ನೇತ್ರಾಶಾಹಿ, ರಾಜ್ ಬಿಸ್ತಾ ಹಾಗೂ ಉದಯ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು,
ನೇಪಾಳದಿಂದ ಬಂದು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರ್ತಿದ್ದ ಆರೋಪಿಗಳು, ಕೆಲಸದ ಮಧ್ಯೆ ಒಂಟಿ ಮನೆಗಳನ್ನ ಟಾರ್ಗೆಟ್ ಮಾಡ್ತಿದ್ರು. ಹಗಲಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ರೆ, ರಾತ್ರಿ ವೇಳೆ ಒಂಟಿ ಮನೆಗಳ್ಳತನ ಮಾಡುತ್ತಿದ್ದರು.
Indian Farming: ಕೃಷಿ ಕ್ಷೇತ್ರಕ್ಕೆ AI ಟೆಕ್ನಾಲಜಿ: ಉದಾಹರಣೆ ಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾಡೆಲ್ಲ!
ಇನ್ನೂ ಆರೋಪಿಗಳ ಬಂಧನದಿಂದ ಐದು ಮನೆಗಳವು ಪ್ರಕರಣ ಬೆಳಕಿಗೆ ಬಂದಿದೆ. ಕದ್ದ ಚಿನ್ನಾಭರಣಗಳನ್ನ ನೇಪಾಳಕ್ಕೆ ಕದ್ದೊಯ್ದು ಆರೋಪಿಗಳು ಮಜಾ ಮಾಡುತ್ತಿದ್ದರು. ಬಂಧಿತ ಮನೆಗಳ್ಳರಿಂದ 212 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗದೆ.