ಗದಗ : ಗದಗ-ಬೆಟಗೇರಿ ನಗರಸಭೆ ಚುನಾವಣಾ ಪ್ರಕ್ರಿಯೆ ಹಿನ್ನೆಲೆ ನಗರಸಣೆ ಕಚೇರಿ ಸುತ್ತಮುತ್ತ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಆದೇಶ ನೀಡಿದ್ದಾರೆ.
ನಗರಸಭೆಯ 300 ಮೀಟರ್ ವ್ಯಾಪ್ತಿಯಲ್ಲಿ 163 ಕಲಂ ಜಾರಿ ಮಾಡಲಾಗಿದ್ದು, ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ. ಗದಗ ಬೆಟಗೇರಿ ನಗರಸಭೆ ಆವರಣದಲ್ಲಿ ಪೊಲೀಸ್ ಸರ್ಪಗಾವಲಿದ್ದು, ಹೆಚ್ಚುವರಿ ಪೊಲೀಸ್ ಅಧಿಕ್ಷಕ, ಸೇರಿದಂತೆ 4 ಡಿವೈಎಸ್ಪ, 8 ಸಿಪಿಐ , 16 ಪಿಎಸ್ಐ,4 ಡಿ ಆರ್, 4 ಕೆ ಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ.
ಪಿಎಸ್ಎಸ್ಕೆ ಗುತ್ತಿಗೆ ನೌಕರರು ಹಾಗೂ ನಿರಾಣಿ ಗ್ರೂಫ್ಸ್ ನಡುವೆ ಜಟಾಜಟಿ
ಇನ್ನೂ ಗದಗ ಬೆಟಗೇರಿ ನಗರಸಭೆ ಮುಂದೆ ಭಾರೀ ಹೈಡ್ರಾಮಾವೇ ನಡೆದಿದೆ. ಬಿಜೆಪಿ ಸದಸ್ಯರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಬಿಜೆಪಿಯ ಸದಸ್ಯರನ್ನು ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದು, ಪೊಲೀಸರ ಜೊತೆ ಬಿಜೆಪಿ ಸದಸ್ಯರು ಮಾತಿನ ಚಕಮಕಿ ನಡೆದಿದೆ. ಕಾನೂನು ಸಚಿವರ ತವರಲ್ಲಿ ಅನ್ಯಾಯವಾಗುತ್ತಿದೆ ಅಂತಾ ಧಿಕ್ಕಾರ ಕೂಗಿದರು. ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯರನ್ನ ಒಳಗೆ ಹೋಗಲು ಬಿಟ್ಟಿದ್ದಾರೆ.
ಇನ್ನು ಬಿಜೆಪಿಗೆ ಬಹುಮತ ಇದ್ದರು ನಗರಸಭೆ ಅಧಿಕಾರ ಕೈತಪ್ಪುವ ಆತಂಕದಲ್ಲಿದೆ. ಬಿಜೆಪಿ ಮೂರು ಸದಸ್ಯರ ಸದಸ್ಯತ್ವ ಅಮಾನತಾಗಿದ್ದು, ನಗರಸಭೆ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಚಂದ್ರು ತಡಸದ, ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮೀ ದಿಂಡೂರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಕೃಷ್ಣ ಪರಾಪುರ, ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.