ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನು ಪಡೆದು ಹೊರ ಬಂದಿರುವ ನಟ ದರ್ಶನ್ ಗೆ ಇದೀಗ ಕೋರ್ಟ್ ಮತ್ತೊಂದು ಬಿಗ್ ರಿಲೀಫ್ ನೀಡಿದೆ. ಈ ಹಿಂದೆ ನಟ ಬೆಂಗಳೂರು ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿತ್ತು. ಇದೀಗ ಆ ಶರತ್ತನ್ನು ಸಡಿಲಿಸಿರುವ ಕೋರ್ಟ್ ವಿದೇಶಕ್ಕೆ ಹೋಗುವುದಾದರೆ ಮಾತ್ರ ಕೋರ್ಟ್ ಅನುಮತಿ ಬೇಕು. ಬೇರೆಲ್ಲೂ ಹೋಗಲು ಕೋರ್ಟ್ ನಿಂದ ಅನುಮತಿ ಪಡೆಯಬೇಕಿಲ್ಲ ಎಂದು ಸೂಚನೆ ನೀಡಿದೆ.
ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನೀಡಲಾಗಿದ್ದು ಆದೇಶ ಸಡಿಲಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಮನವಿಗೆ ಸ್ಪಂದಿಸಿದ ಹೈಕೋರ್ಟ್ ಈ ಸಡಿಲಿಕೆ ನೀಡಿದೆ.
ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಫೀಠ ಈ ಆದೇಶ ನೀಡಿದೆ. ಕೇವಲ ದರ್ಶನ್ ಗೆ ಮಾತ್ರ ಷರತ್ತು ಸಡಿಸಿ ಆದೇಶಿಸಿದ ನೀಡಲಾಗಿದೆ. ಸಿನಿಮಾ ನಟನಾಗಿದ್ದು ಚಿತ್ರಿಕರಣಕ್ಕಾಗಿ ಬೆಂಗಳೂರು ಬಿಟ್ಟು ಬೇರೆಡೆ ಹೋಗಲು ಅವಕಾಶಕ್ಕೆ ಮನವಿ ಮಾಡಿದ್ದ ದರ್ಶನ್ ಅವರಿಗೆ ಸದ್ಯ ಬೆಂಗಳೂರು ಬಿಟ್ಟು ಹೋಗಲು ಹೈಕೋರ್ಟ್ ಅವಕಾಶ ನೀಡಿದೆ. ಆದ್ರೆ ವಿದೇಶಕ್ಕೆ ಹೋಗುವುದಾದರೆ ಕೋರ್ಟ್ ಅನುಮತಿ ಕಡ್ಡಾಯವಾಗಿ ಪಡೆಯ ಬೇಕು ಎಂದು ಸೂಚನೆ ನೀಡಿದೆ.
ವಿದೇಶಕ್ಕೆ ಹೊಗಲು ಸೆಷನ್ಸ್ ಕೋರ್ಟ್ ಅನುಮತಿ ಅಗತ್ಯ, ವಿಚಾರಣೆ ವೇಳೆ ಸಿನಿಮಾ ಶೂಟಿಂಗ್ ವಿಚಾರ ಪ್ರಸ್ತಾಪಿಸಿದ್ದ ದರ್ಶನ್ ವಕೀಲರು, 8 ವಾರಗಳ ಹಿಂದೆ ನಿಲ್ಲಲು ಸಾಧವಿಲ್ಲ ಎಂದು ಹೇಳಿದ್ರು. ಈಗ ಸಿನಿಮಾ ಶೂಟಿಂಗ್ ಗಾಗಿ ಅವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ಎಸ್ಪಿಪಿ ಆಕ್ಷೇಪಿಸಿದ್ರು.. ಅಂತಿಮವಾಗಿ ಷರತ್ತು ಸಡಿಸಿಲಿ ಹೈಕೋರ್ಟ್ ಆದೇಶ ನೀಡಿದೆ.