ವಾಷಿಂಗ್ಟನ್: ಮಗನಿಗೆ 18 ವರ್ಷ ತುಂಬುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಹುಟ್ಟುಹಬ್ಬಕ್ಕೂ ಮುನ್ನವೇ ಅಮೆರಿಕದ ಮಹಿಳೆಯೊಬ್ಬರು ತನ್ನ ಮಗನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಮಿಚಿಗನ್ನ ಮಹಿಳೆ ಕೇಟೀ ಲೀ (39) ತನ್ನ ಮಗನ 18 ನೇ ಹುಟ್ಟುಹಬ್ಬದ ಮುನ್ನಾ ದಿನದಂದು ಕೊಲೆ ಮಾಡಿದ್ದಾಳೆ. ತನ್ನ ಜೀವನವನ್ನು ತಾನೇ ಕೊನೆಗೊಳಿಸಲು ಪುತ್ರ ಬಯಸಿದ್ದ ಎಂದು ಮಹಿಳೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
ಘಟನೆ ನಡೆದ ಸ್ಥಳಗೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಮಹಿಳೆಯ ಕೃತ್ಯ ಬಯಲಾಗಿದೆ. ಆರೋಪಿ ಮಹಿಳೆ ಕೇಟೀ ಲೀ ಮನೆಯಲ್ಲಿ ತನ್ನ ಮಗನನ್ನು ಹತ್ಯೆ ಮಾಡಿ ಚಾಕು ಹಿಡಿದು ನಿಂತಿದ್ದಳು. ಅಪಾರ್ಟ್ಮೆಂಟ್ ಒಳಗೆ ಪೊಲೀಸರಿಗೆ ಆರೋಪಿ ಲೀ ಅವರ ಮಗ 17 ವರ್ಷದ ಆಸ್ಟಿನ್ ಡೀನ್ ಪಿಕಾರ್ಟ್ ಶವ ಸಿಕ್ಕಿದೆ.
ಸಾಯುವುದಕ್ಕಾಗಿ ನಾನು ಮತ್ತು ಮಗ ಇಬ್ಬರೂ ಅತಿಯಾಗಿ ಮಾತ್ರೆ ಸೇವಿಸಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ. ದೂರಿನ ಪ್ರಕಾರ, ಮಗ ಪ್ರಜ್ಞೆ ತಪ್ಪಿದ್ದಾಗ ಚಾಕುವಿನಿಂದ ಆತನ ಗಂಟಲು ಮತ್ತು ತೋಳಿನ ಭಾಗವನ್ನು ಚಾಕುವಿನಿಂದ ಆಕೆ ಕೊಯ್ದಿದ್ದಳು ಎಂದು ವರದಿಯಾಗಿದೆ. ನಾನು ನನ್ನ ಮಗನ ಜೊತೆ ಇರಬೇಕು. ನನ್ನನ್ನೂ ಕೊಂದುಬಿಡಿ ಎಂದು ಆರೋಪಿ ಮಹಿಳೆ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.