ರಾಜ್ಕುಮಾರ್ ಅನ್ನೋ ಹೆಸರು ಕನ್ನಡಿಗರು ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ. ನಟನೆ, ಹಾಡು, ಕನ್ನಡದ ಕಲಾಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟುಕೊಂಡವರು ವರನಟ ಡಾ.ರಾಜ್ ಕುಮಾರ್. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಡಾ.ರಾಜ್ಕುಮಾರ್ ಅವರೊಬ್ಬ ಭಯಾನಕ ಗಾಯಕ ಎಂದು ಯುವ ಸಿಂಗರ್ವೊಬ್ಬ ಮಾಡಿರುವ ಪೋಸ್ಟ್ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಫೆ.25 ರಂದು ಸೋಶಿಯಲ್ಮಿಡಿಯಾದಲ್ಲಿ ಸಂಜಯ್ ನಾಗ್ ಎನ್ನುವ ಯುವ ಗಾಯಕ ‘ಡಾ. ರಾಜ್ಕುಮಾರ್ ಅವರು ಬಹುಶಃ ಅತ್ಯುತ್ತಮ ನಟನಾಗಿರಬಹುದು. ಆದರೆ, ಭಯಾನಕ ಗಾಯಕ’ ಎಂದು ಟ್ವೀಟ್ ಮಾಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಕಷ್ಟು ಜನರು ಸಂಜಯ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಕಂಗಾಲಾದ ಯುವ ಗಾಯಕ ತಕ್ಷಣವೇ ತನ್ನ ಅಕೌಂಟ್ ಅನ್ನೇ ಡಿಲೀಟ್ ಮಾಡಿದ್ದಾನೆ. ಆದರೆ, ಆತ ಡಿಲೀಟ್ ಮಾಡುವ ವೇಳೆಗಾಗಲೇ ರಾಜ್ಕುಮಾರ್ ಅವರ ಎಷ್ಟು ಶ್ರೇಷ್ಠ ಗಾಯಕ ಅನ್ನೋದರ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ಪೋಸ್ಟ್ಗಳನ್ನು ಹಲವರು ಹಂಚಿಕೊಂಡಿದ್ದಾರೆ.
‘ಅಣ್ಣಾವ್ರು ಹಾಡೋದು ಕೇಳೋದು ಒಂದು ಭಾಗ್ಯ. ಅವರ ಧ್ವನಿ ನಾ ಕರ್ಕಶ ಅನ್ನೋ ಸೆಡೆ ಗಳಿಗೆ ಹೇಳೋದು ಒಂದೇ ಈ ಹಾಡನ್ನ ನೀವುಗಳು ಹಾಡೋದು ಏನು ಬೇಡ ಅದು ಕನಸ್ಸಲ್ಲು ಆಗಲ್ಲ.ಸ್ಪಷ್ಟವಾಗಿ ಓದಿ ತೋರಿಸಿ ಸಾಕು ಆಮೇಲೆ ಅವರ ಧ್ವನಿ ಬಗ್ಗೆ ಮಾತಾಡುವಿರಂತೆ’ ಎಂದು ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ರಾಜ್ಕುಮಾರ್ ಹಾಡಿದ ಹಾಡನ್ನು ಹಂಚಿಕೊಂಡಿದ್ದಾರೆ.