ಚಿಕ್ಕಮಗಳೂರು: ರೈತರೊಬ್ಬರಿಗೆ ಹದಿಮೂರು ವರ್ಷದ ಕರೆಂಟ್ ಬಿಲ್ ಒಟ್ಟಿಗೆ ಬಂದಿದ್ದು, ತಮಗೆ ಬಂದ ಮೆಸ್ಕಾಂ ಬಿಲ್ ನೋಡಿ ಶಾಕ್ ಆಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದ ಉಮೇಶ್ ಎಂಬುವರಿಗೆ ಹದಿಮೂರು ವರ್ಷದ ಬಿಲ್ ಒಟ್ಟಿಗೆ ಬಂದಿದೆ. ಆದರೆ ಈ 13 ವರ್ಷಗಳ ಒಟ್ಟು ಬಿಲ್ ಮೂರು ಲಕ್ಷಕ್ಕೂ ಅಧಿಕವಾಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ಮೇಕೆಗೆ ಮೇವು ಸಿಗಲೆಂದು ಅರಣ್ಯ ಪ್ರದೇಶದ ಒಣಹುಲ್ಲಿಗೆ ಬೆಂಕಿ ಇಟ್ಟವನ ಬಂಧನ
ಸರ್ಕಾರ ಕೃಷಿ ಉದ್ದೇಶಕ್ಕೆ 10 ಹೆಚ್ಪಿ ಮೋಟರ್ ಬಳಕೆಗೆ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಬಂಗಾರಪ್ಪ ಅವರು ಸಿಎಂ ಆಗಿದ್ದಾಗಲೇ ವಿದ್ಯುತ್ ಉಚಿತ ಯೋಜನೆಘೋಷಿಸಿದ್ದರು. ಬಂಗಾರಪ್ಪ ಅವರ ಕಾಲದಿಂದಲೂ ಸಹ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದ್ದು, ಈಗ ಏಕಾಏಕಿ ಮೆಸ್ಕಾಂ ಬಿಲ್ ನೀಡಿದೆ ಎಂದು ರೈತ ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, 13 ವರ್ಷಕ್ಕೂ ಹೆಚ್ಚು ಕಾಲ ಬಿಲ್ ನೀಡದೆ ಈಗ ಏಕಾಏಕಿ ಕೊಟ್ಟಿರೋದು ಯಾಕೆ ಅನ್ನೋದು ರೈತರ ಪ್ರಶ್ನೆಯಾಗಿದೆ. ಸದ್ಯ ಲಕ್ಷಾಂತರ ರೂಪಾಯಿ ಬಿಲ್ ನೋಡಿ ರೈತ ಉಮೇಶ್ ಕಂಗಾಲಾಗಿದ್ದು, ಬಿಲ್ ಪಾವತಿಗೆ 15 ದಿನ ಕಾಲಾವಕಾಶ ನೀಡಿದ್ದು, ಪಾವತಿಸದೇ ಇದ್ದರೆ ವಿದ್ಯುತ್ ಕಟ್ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.