ಕಲಬುರಗಿ : ಆಳಂದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು, ನ್ಯಾಯಾಲಯ 15 ಜನರಿಗೆ ಅನುಮತಿ ನೀಡಿದೆ. ಅದರಲ್ಲಿ ನಾನೂ ಒಬ್ಬ ಹೋಗುತ್ತೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ಕೋರ್ಟ್ ಅನುಮತಿ ನೀಡಿದೆ. ಅಲ್ಲಿ ಪೂಜೆ ಮಾತ್ರ ಮಾಡುತ್ತೇವೆ. ಯಾವುದೇ ಗದ್ದಲ ಗೊಂದಲ ಇಲ್ಲವೇ ಇಲ್ಲ. ವಕ್ಫ್ ಬೋರ್ಡ್ ಟ್ರಿಬ್ಯೂನಲ್ ಆಂದೋಲಾ ಸ್ವಾಮೀಜಿಗೆ ಬ್ಯಾನ್ ಮಾಡಿದೆ. ಅದು ಇಸ್ಲಾಂಗೆ ಸಂಬಂಧಿಸಿದ ಕೋರ್ಟ್, ಅದನ್ನು ನಾವ್ಯಾಕೆ ಒಪ್ಪಬೇಕು ಎಂದರು.
ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಸಿದ್ದತೆ ; ಆಳಂದ ಪಟ್ಟಣದಲ್ಲಿ ಬಿಗಿ ಭದ್ರತೆ
ಸಾವಿರಾರು ವರ್ಷಗಳಿಂದ ಪೂಜೆ ನಡೆಯುತ್ತಿರುವ ದೇವರಿಗೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ಪಡೆಯಬೇಕು ಎನ್ನುವುದೇ ನಾಚಿಕೆಗೇಡಿನ ಸಂಗತಿ, ಈ ರೀತಿಯ ವ್ಯವಸ್ಥೆಯ ವಿರುದ್ದ ಹೋರಾಟ ನಮ್ಮದು. ರಾಘವ ಚೈತನ್ಯ ಶಿವಲಿಂಗಕ್ಕೆ ನೂರಾರು ವರ್ಷಗಳಿಂದ ಪೂಜೆ ನಡೆಯುತ್ತಿದೆ. ಇವತ್ತು ನ್ಯಾಯಾಲಯದ ನಿರ್ದೇಶನದಂತೆ ಪೂಜೆ ಮುಗಿಸಿ ಮುಂದಿನ ಹೋರಾಟ ಮಾಡುತ್ತೇವೆ. ಬರುವ ಯುಗಾದಿಗೆ ಆಂದೋಲಾ ಸ್ವಾಮಿಜಿ ನೇತೃತ್ವದಲ್ಲಿ ಮತ್ತೆ ಪೂಜೆ ಮಾಡುತ್ತೇವೆ ಎಂದರು.