ಬೀದರ್ : ಮಹಾಶಿವರಾತ್ರಿ ಪ್ರಯುಕ್ತ ಬೀದರ್ ತಾಲೂಕಿನ ಹೋನ್ನೆಕೇರಿ ಸಿದ್ದೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತುಉ. ಜಿಲ್ಲೆಯ ಜನರು ಸೇರಿದಂತೆ ಕರ್ನಾಟಕ ಹಾಗೂ ನೆರೆಯ ರಾಜ್ಯ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಸಿದ್ದತೆ ; ಆಳಂದ ಪಟ್ಟಣದಲ್ಲಿ ಬಿಗಿ ಭದ್ರತೆ
ಹೋನ್ನೆಕೇರಿ ಸಿದ್ದೆಶ್ವರ ದೇವರ ಗರ್ಭಗುಡಿಗೆ ಗುಲಾಬಿ, ಮಲ್ಲಿಗೆ , ಸೇವಂತಿ ಸೇರಿದಂತೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಒಳಗರ್ಭ ಗುಡಿಯಲ್ಲಿ ದ್ರಾಕ್ಷಿ ಸೇರಿದ ವಿವಿದ ಹಣ್ಣುಗಳಿಂದ ಅಲಂಕಾರ ಮಾಡಲಾಯಿತು. ನಸುಕಿನ ಜಾವ 5ಗಂಟೆಯಿಂದಲೇ ರುದ್ರಾಭಿಷೇಕ ಅಭಿಷೇಕ ಸೇರಿದಂತೆ ವಿವಿಧ ಪೂಜೆ ಜರಗಿದವು.