ಬೆಂಗಳೂರು: ಅತಿ ವೇಗ ಚಾಲನೆ ಮಾಡುವುದು ತಪ್ಪು ಎಂದು ತಿಳಿದಿದ್ದರೂ, ಸಾಕಷ್ಟು ಜನ ವೇಗವಾಗಿ ಚಾಲನೆ ಮಾಡುತ್ತಾರೆ. ಅದರಿಂದ ಆಪತ್ತು ಎದುರಾಗುತ್ತವೆ. ಇದೀಗ ಅತೀವೇಗದಿಂದ ಬಂದ ಬೈಕ್ ಸವಾರ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಜೆ.ಪಿ.ಪಾರ್ಕ್ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಮಧ್ಯರಾತ್ರಿ 1.30 ಸುಮಾರಿಗೆ ನಡೆದಿದೆ.
ಅರುಣ್(30) ಸಾವನ್ನಪ್ಪಿದ ಬೈಕ್ ಸವಾರನಾಗಿದ್ದು, ಹೆಲ್ಮೆಟ್ ಧರಿಸದೇ ವೇಗವಾಗಿ ತನ್ನ ಬುಲೆಟ್ ಬೈಕ್ ನಲ್ಲಿ ಬಂದ ಅರುಣ್, ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಅರುಣ್ ಮೃತಪಟ್ಟಿದ್ದನು. ಯಶವಂತಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.