ಬೀದರ್ : ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಹಿಂತಿರುಗುವಾಗ ಸಂಭವಿಸಿದ ಅಪಘಾತದಲ್ಲಿ ಬೀದರ ಜಿಲ್ಲೆಯ 15 ಜನ ಗಾಯಗೊಂಡಿದ್ದಾರೆ.
ಬೀದರ್ ಜಿಲ್ಲೆಯ ಹುಮನಾಬಾದ್ ಹಾಗೂ ಬಸವಕಲ್ಯಾಣದ ಭಾವಸಾರ ಸಮಾಜದವರು ಟೆಂಪೊ ಟ್ರಾವೆಲರ್ನಲ್ಲಿ ಪ್ರಯಾಗರಾಜ್ಗೆ ತೆರಳಿದ್ದರು. ಕುಂಭಸ್ನಾನದಲ್ಲಿ ಭಾಗವಹಿಸಿ ಮಂಗಳವಾರ ಹಿಂತಿರುಗುವಾಗ ಮಹಾರಾಷ್ಟ್ರದ ನಾಗಪೂರ ಸಮೀಪದ ವಾರ್ಧಾ ಹತ್ತಿರ ಎದುರಿನಿಂದ ಬಂದ ಲಾರಿಗೆ ಟಿಟಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ. ಗಾಯಗೊಂಡವರಿಗೆ ಮಹಾರಾಷ್ಟ್ರದ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಸ್ತೆ ಅಪಘಾತ: ಕುಂಭಮೇಳಕ್ಕೆ ತೆರಳಿದ್ದ ವಿಜಯಪುರ ಮೂಲದ ಇಬ್ಬರು ಯಾತ್ರಾರ್ಥಿಗಳು ಸಾವು
ಹುಮನಾಬಾದಿನ ಅನಿಲ್ ಡೈಜೋಡೆ, ಅನೀತಾ ಡೈಜೋಡೆ, ಬೀದರ್ನ ಪ್ರಕಾಶ ತಾಂದಳೆ, ಅರುಣಾ ಕಾಳೇಕರ್, ಭೀಮರಾವ್ ಕಾಳೇಕರ್, ದಿಲೀಪ್ ಕಾಳೇಕರ್ ಹಾಗೂ ಬಸವಕಲ್ಯಾಣದ ಅನಿಲ್ ಸುತ್ರಾವೆ ಗಾಯಗೊಂಡಿದ್ದಾರೆ.