ಧಾರವಾಡ : ಕುಂದಗೋಳ ತಾಲೂಕಿನ ಅತಿ ದೊಡ್ಡ ಗ್ರಾಮವಾದ ಸಂಶಿ ಗ್ರಾಮದ ಸೌಲಭ್ಯಗಳಾಗಿ ಅನೇಕ ಬಾರಿ ಮನವಿ ಸಲ್ಲಿಸಿದರು, ಇದುವರೆಗೂ ಸ್ಪಂದಿಸದ ಕಾರಣ ಮಾ.3 ರಾಜ್ಯ ಹೆದ್ದಾರಿ ಬಂದ್ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಗ್ರಾಮದ ಮುಖಂಡ ನಿವೃತ್ತ ಶಿಕ್ಷಕರಾದ ಎನ್.ಎಫ್. ನದಾಫ್ ಮಾರ್ಚ್ 3ರಂದು ಶಾಲಾಕಾಲೇಜುಗಳ ಸಹಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕಿನ ಸಂಶಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಭೂದಾನ ಮಾಡಿ ಅನೇಕ ವರ್ಷವಾದರೂ ಕಟ್ಟಡ ನಿರ್ಮಿಸುತ್ತಿಲ್ಲ. ಸರ್ಕಾರಿ ಪ್ರೌಢಶಾಲೆಗೆ ಕೊಠಡಿಗಳ ಕೊರತೆ ಹಾಗೂ ರಸ್ತೆ ನಿರ್ಮಾಣ, ಸಾರಿಗೆ ಸೌಲಭ್ಯ , ಸಂಶಿ ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ ಹಾಗೂ ಧಾರವಾಡ ಮೈಸೂರು ಎಕ್ಸ್ಪ್ರೆಸ್ ರೈಲು ನಿಲುಗಡೆ , ಬೆಳಗಾವಿ ಮೈಸೂರು ರೈಲು ನಿಲುಗಡೆಗಾಗೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಸಹ ಸ್ಪಂದಿಸದೆ ಇರುವುದರಿಂದ ಪಕ್ಷಾತೀತವಾಗಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮುಖಂಡ ಎ ಬಿ ಉಪ್ಪಿನ ಮಾತನಾಡಿ ಜನಸ್ಪಂದನೆಗಳಲ್ಲಿ ಅನೇಕ ಭಾರಿ ಗ್ರಾಮದ ಅಭಿವೃದ್ದಿಗಾಗಿ ಮನವಿ ಸಲ್ಲಿಸಿದರು. ಕೇವಲ ಉತ್ತರ ಮಾತ್ರ ದೊರಕಿದ್ದು ಆದರೆ ಕೆಲಸಗಳಾಗಿಲ್ಲ. ಶಾಸಕರು ಕೇವಲ ಸದನದಲ್ಲಿ ಮಾತನಾಡಿದರೆ ಸಾಲದು. ಒಳಹೊಕ್ಕು ಅಭಿವೃದ್ದಿ ಕೆಲಸಗಳನ್ನು ತರಬೇಕು, ಅಧಿಕಾರ ಇಲ್ಲದಿದ್ದಾಗ ಸಾಕಷ್ಟು ಅಭಿವೃದ್ದಿಗೆ ಅನುದಾನ ತಂದಿದ್ದಾರೆ. ಆದರೆ ಈಗ ಶಾಸಕರಾಗಿದ್ದಾರೆ ಅದರಂತೆ ಅಭಿವೃದ್ದಿಪಡಿಸಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಪರಮೇಶ್ವರ ನಾಯ್ಕರ ಮಾತನಾಡಿ ನೆರೆಯ ತಾಲೂಕಿಗೆ ನೂರಾರೂ ಕೋಟಿ ಅಭಿವೃದ್ದಿಗೆ ಅನುದಾನ ಬರುತ್ತಿದ್ದು ಆದರೆ ಈ ಕ್ಷೇತ್ರಕ್ಕೆ ಏತಕ್ಕೆ ಬರುತ್ತಿಲ್ಲಾ, ಗ್ರಾಮದ ಬೇಡಿಕೆಗೆ ಸರಕಾರ,ಶಾಸಕರು, ಸ್ಪಂದಿಸದೆ ಇದ್ದರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.