ಸುರಕ್ಷಿತ ಹೂಡಿಕೆ ಅಂದ್ರೆ ಮೊದಲು ನೆನಪಿಗೆ ಬರುವುದೇ ಸ್ಥಿರ ಠೇವಣಿ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಗಳ ಈ ಯುಗದಲ್ಲೂ ಸ್ಥಿರ ಠೇವಣಿಗಳಿಗೆ ಇನ್ನೂ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಅದರಲ್ಲೂ ಈಗಿನ ಈ ಅನಿಶ್ಚಿತತೆಯ ಸಮಯದಲ್ಲಿ ಜನರು ಹೆಚ್ಚು ಹೆಚ್ಚು ಸ್ಥಿರ ಠೇವಣಿಗಳತ್ತ ಮುಖ ಮಾಡುತ್ತಿದ್ದಾರೆ.
ಕುಮಾರಸ್ವಾಮಿಗೆ ಬಿಗ್ ಶಾಕ್: ಡಿನೋಟಿಫಿಕೇಷನ್ ಪ್ರಕರಣದಲ್ಲಿ ಅರ್ಜಿ ವಜಾ ಮಾಡಿದ ಸುಪ್ರೀಂ!
ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಸ್ವಲ್ಪ ಏರುಪೇರಾಗಿದೆ. ಕಳೆದ ಎರಡು ಮೂರು ತಿಂಗಳುಗಳಿಂದ ಸೆನ್ಸೆಕ್ಸ್, ನಿಫ್ಟಿ ಎಲ್ಲಾ ಕೆಳಗೆ ಬೀಳ್ತಾನೇ ಇದೆ. ಹೂಡಿಕೆದಾರರು ಹಣ ಹಾಕೋಕೆ ಹೆದರಿಕೊಳ್ಳುತ್ತಿದ್ದಾರೆ. ಎಲ್ಲರ ಮನಸ್ಸಿನಲ್ಲೂ ಒಂದೇ ಪ್ರಶ್ನೆ – ಮಾರುಕಟ್ಟೆ ಯಾವಾಗ ಸರಿ ಹೋಗುತ್ತೆ? ನಾವು ಹಾಕಿರುವ ಹಣ ವಾಪಸ್ ಸಿಗುತ್ತಾ? ಲಾಭ ಬರುತ್ತಾ? ಈ ಚಿಂತೆ ಎಲ್ಲರನ್ನೂ ಕಾಡ್ತಿದೆ
ನಿಜ ಹೇಳಬೇಕೆಂದರೆ, ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯ. ಒಮ್ಮೊಮ್ಮೆ ಲಾಭ ಬರುತ್ತೆ, ಒಮ್ಮೊಮ್ಮೆ ನಷ್ಟನೂ ಆಗುತ್ತೆ. ಆದರೆ ಈ ರಿಸ್ಕ್ ಎಲ್ಲರಿಗೂ ತೆಗೆದುಕೊಳ್ಳೋಕೆ ಆಗಲ್ಲ. ಅಂದರೆ ಹಣ ಹಾಕಿದರೆ ಅದು ಸೇಫ್ ಆಗಿರಬೇಕು, ನಷ್ಟ ಆಗಬಾರದು ಅನ್ನೋ ಭರವಸೆ ಜನರಿಗೆ ಬೇಕು.
ಅಂಥವರಿಗೆ ಸುರಕ್ಷಿತ ಹೂಡಿಕೆ ಅಂದ್ರೆ ಮೊದಲು ನೆನಪಿಗೆ ಬರುವುದೇ FDಗಳು. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಗಳ ಜಮಾನದಲ್ಲೂ ಈ FDಗಳಿಗೆ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಈ ಅನಿಶ್ಚಿತ ಸಮಯದಲ್ಲಿ ಜನರು FDಗಳ ಕಡೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ನಮ್ಮ ದೇಶದ ದೊಡ್ಡ ಬ್ಯಾಂಕ್ಗಳಲ್ಲಿ ಒಂದು. ಇಲ್ಲಿ FDಗಳ ಮೇಲೆ ಒಳ್ಳೆಯ ಬಡ್ಡಿ ಸಿಗುತ್ತದೆ. ನೀವು ಬೇರೆ ಬೇರೆ ಅವಧಿಗೆ ಹಣ ಹೂಡಬಹುದು. ಗ್ರಾಹಕರಿಗೆ 4.25% ರಿಂದ 7.30% ವರೆಗೆ ಬಡ್ಡಿ ಸಿಗುತ್ತದೆ. ಅಂದರೆ ನಿಮಗೆ ಖಂಡಿತ ಒಳ್ಳೆಯ ಆದಾಯ ಸಿಗುತ್ತದೆ.
ಬ್ಯಾಂಕ್ ಆಫ್ ಬರೋಡಾದಲ್ಲಿ 12 ತಿಂಗಳು (1 ವರ್ಷ) ಅವಧಿಯ FDಗೆ ಸಾಮಾನ್ಯ ಗ್ರಾಹಕರಿಗೆ 6.85% ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಇನ್ನೂ ಸ್ವಲ್ಪ ಹೆಚ್ಚು, ಅಂದರೆ 7.35% ಬಡ್ಡಿ ಸಿಗುತ್ತದೆ. 5 ಲಕ್ಷ ರೂಪಾಯಿ FD ಹಾಕಿದರೆ 1 ವರ್ಷದ ನಂತರ ಎಷ್ಟು ಹಣ ಸಿಗುತ್ತದೆ ಗೊತ್ತಾ?
FD ಕ್ಯಾಲ್ಕುಲೇಟರ್ ಪ್ರಕಾರ, 6.85% ಬಡ್ಡಿದರದಲ್ಲಿ ಒಬ್ಬ ಸಾಮಾನ್ಯ ಗ್ರಾಹಕನಿಗೆ 1 ವರ್ಷಕ್ಕೆ ₹35,140 ಬಡ್ಡಿ ಸಿಗುತ್ತದೆ. ಅಂದರೆ ವರ್ಷದ ಕೊನೆಯಲ್ಲಿ ಬಡ್ಡಿ ಮತ್ತು ಅಸಲು ಸೇರಿ ಒಟ್ಟು ₹5,35,140 ಸಿಗುತ್ತದೆ
ಹಿರಿಯ ನಾಗರಿಕರಿಗೆ ಬಡ್ಡಿ ದರ ಹೆಚ್ಚಿರುವುದರಿಂದ ಅವರಿಗೆ ಲಾಭ ಜಾಸ್ತಿ. ಅವರು 12 ತಿಂಗಳ FDಗೆ 5 ಲಕ್ಷ ಹಾಕಿದರೆ, 7.35% ಬಡ್ಡಿದರದಲ್ಲಿ ₹37,775 ಬಡ್ಡಿ ಸಿಗುತ್ತದೆ. ಅಂದರೆ ಅವರಿಗೆ ವರ್ಷದ ಕೊನೆಯಲ್ಲಿ ಒಟ್ಟು ₹537,775 ಸಿಗುತ್ತದೆ.
ಅದೇ ರೀತಿ ನೀವು 12 ತಿಂಗಳಿಗೆ 10 ಲಕ್ಷ ರೂಪಾಯಿ FD ಮಾಡಿದರೆ ನಿಮಗೆ ಲಾಭ ಇನ್ನೂ ಜಾಸ್ತಿ. ಯಾಕೆಂದರೆ ನೀವು ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದೀರಿ. ಈ ಸಂದರ್ಭದಲ್ಲಿ, 6.85% ಬಡ್ಡಿದರದಲ್ಲಿ ಒಬ್ಬ ಸಾಮಾನ್ಯ ಗ್ರಾಹಕನಿಗೆ ₹75,551 ಬಡ್ಡಿ ಸಿಗುತ್ತದೆ. ಅಂದರೆ ಬಡ್ಡಿ ಮತ್ತು ಅಸಲು ಸೇರಿ ಒಟ್ಟು ₹10,75,551 ಸಿಗುತ್ತದೆ.