ಮಂಡ್ಯ:- ಮಂಡ್ಯದ ಕೆರಗೋಡಿನಲ್ಲಿ ಮಹಾ ಶಿವರಾತ್ರಿಯಂದು ಶಿವಲಿಂಗದ ಮೇಲೆ ಸೂರ್ಯ ರಷ್ಮಿ ಸ್ಪರ್ಷವಾಗಲಿದೆ. ಈ ದೃಶ್ಯ ಕಣ್ತುಂಬಿಕೊಳ್ಳೋಕೆ ಅಂತ ಲಕ್ಷಾಂತರ ಭಕ್ತರು ಕಾತುರರಾಗಿ ಕಾಯ್ತಿದ್ದಾರೆ. ಇದ್ರ ಜೊತೆಗೆ ಈ ಬಾರಿ ಕ್ಷೇತ್ರದಲ್ಲಿ ಪಂಚಲಿಂಗೋತ್ಸವ ಕಾರ್ಯಕ್ರಮ ಕೂಡ ಆಯೋಜನೆಯಾಗಿದ್ದು, ಪಂಚಲಿಂಗ ಸನ್ನಿದಿ ಜಾಗರಣೆಗೆ ಸಿದ್ದವಾಗಿದೆ.
ಬೆಂಗಳೂರು ಮೂರು ಮಹಾನಗರ ಪಾಲಿಕೆ ಮಾಡಿದ್ರೆ, ಅಭಿವೃದ್ಧಿ ಮಾಡಬಹುದು – ಸಚಿವ ಜಮೀರ್!
ಹೌದು., ನಾಳೆ ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂತ ಸಂಭ್ರಮಕ್ಕೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮ ಕೂಡ ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಪುರಾತನ ದೇವಾಲಯವಾದ ಪಂಚಲಿಂಗೇಶ್ವರ ಸನ್ನಿದಿಯಲ್ಲಿ ಶಿವಲಿಂಗದ ಮೇಲೆ ಸೂರ್ಯ ರಷ್ಮಿ ಸ್ಪರ್ಷವಾಗಲಿದೆ.
ಇನ್ನು ಮತ್ತೊಂದು ಕಡೆ ದೇವಸ್ಥಾನದ ಆವರಣದಲ್ಲಿ ಎರಡನೇ ವರ್ಷದ ಪಂಚಲಿಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ನ ಹೆಸ್ರಾಂತ ನಟ, ನಟಿಯರು ಸೇರಿದಂತೆ ಗಾಯಕರು ಬಾಗಿಯಾಗಲಿದ್ದು, ಮನರಂಜನೆಯ ಸುಗ್ಗಿ ನೀಡಲಿದ್ದಾರೆ. ಅಷ್ಟೇ ಅಲ್ಲದೆ ಕಾಶಿಯ ಗಂಗಾರತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿದ್ದು, ಭಕ್ತರ ಜಾಗರಣೆಗೆ ಅನೂಕೂಲ ಮಾಡಿದ್ದಾರೆ. ಇದರ ಭಾಗವಾಗಿ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಇಂದು ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಸಿದ್ದತೆ ಕುರಿತು ಪರಿಶೀಲನೆ ನಡೆಸಿದ್ರು.
ಇನ್ನು ಕೆರಗೋಡು ಗ್ರಾಮದಲ್ಲಿ ಪಂಚಲಿಂಗೋತ್ಸವ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸೋ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದು ಸ್ಥಳದಲ್ಲಿ
1 KSRP,, 1 DSP, 3 CPI, 11 CPI ಸೇರಿದಂತೆ 120ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ,
ನಟ- ನಟಿಯರು ಕಾರ್ಯಕ್ರಮಕ್ಕೆ ಆಗಮಿಸೋ ಹಿನ್ನೆಲೆ ಹೆಚ್ಚು ಜನರು ಬರುವ ಸಾಧ್ಯತೆ ಇರುವುದರಿಂದ
ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಿಕೊಂಡು ಮೂರು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಹಾಗೂ ವಿಐಪಿ ವಾಹನಗಳಿಗೆ ಸ್ಟೇಜ್ ಹಿಂಭಾಗ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ
ವಾಹನ ದಟ್ಟಣೆ ನೋಡಿಕೊಂಡು ರಸ್ತೆ ಬದಲಾವಣೆ ಮಾಡಲಾಗುವುದು
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋ ಬಸ್ತ್ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು
ಇನ್ನು ನಾಳೆ ಬೆಳಗ್ಗೆ ಶಿವಲಿಂಗದ ಮೇಲೆ ಸೂರ್ಯ ರಷ್ಮ ಸ್ಪರ್ಷವಾಗ್ತಿದ್ದಂತೆ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅತ್ತ ಭಕ್ತರು ಕೂಡ ದೇವರ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.