ಕೋಲಾರ – ಸಾವಿರಾರು ವರ್ಷಗಳ ಶೋಷಣೆಯನ್ನು ಹೊತ್ತಿರುವ ಸಮುದಾಯಗಳನ್ನು ಮುನ್ನಡೆಸಲು ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ವಿಷಯಾಧಾರಿತ ಹೋರಾಟಗಳ ಜೊತೆಗೆ ಜಾತಿ ಆಧಾರಿತ ಜನಗಣತಿಗೆ ಜನರನ್ನು ಅಂತಿಮ ಗೊಳಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಎನ್.ವೆಂಕಟೇಶ್ ಅಭಿಪ್ರಾಯ ಪಟ್ಟರು. ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಜನಪರ ಉತ್ಸವದಲ್ಲಿ ಆಯೋಜಿಸಿದ್ದ, ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ತಲ್ಲಣಗಳು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
Mahashivaratri: ಈಶ್ವರ ಹುಟ್ಟಿದ್ದು ಹೇಗೆ? ಶಿವನ ಅವತಾರದ ರೋಚಕ ಕಥೆ ನೀವು ತಿಳಿಯಲೇಬೇಕು!
ಅಂದು 70ರ ದಶಕದಲ್ಲಿ ತುಮಕೂರಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಾಗಾರ ದಸಂಸವನ್ನು ಸಾಂಸ್ಕೃತಿಕ ಚಳುವಳಿಯಾಗಿ ಮುಂದುವರೆಸಲು ಸಾಧ್ಯವಾಯಿತು. ಬೆಲ್ಚಿ ನಾಟಕವನ್ನು ಕಲಿತು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಿದೆವು. ಇದು ಸಂಘಟನೆಯಲ್ಲಿ ಪ್ರೀತಿ ವಿಶ್ವಾಸ ನಂಬಿಕೆಗಳನ್ನು ತುಂಬಿತು. ಇವೆಲ್ಲವೂ ಸೈದ್ಧಾಂತಿಕ ಚೌಕಟ್ಟಿನಲ್ಲಿ ಚಳುವಳಿ ಕಟ್ಟಲು ಸಾಧ್ಯವಾಯಿತು.
ದಕ್ಷಿಣ ಭಾರತದ ಶೋಷಿತ ವರ್ಗಗಳಾದ ಅಹಿಂದ ಸಮುದಾಯಗಳ ಸಾಂಸ್ಕೃತಿಕ ಹೋರಾಟಗಳ ಕಾರಣದಿಂದ ತೆಲಂಗಾಣದಲ್ಲಿ ಗದ್ದರ್ ಸಾಂಸ್ಕೃತಿಕ ಹೋರಾಟ, ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯ ಸೈದ್ಧಾಂತಿಕ
ಹೋರಾಟ ದೇಶದಲ್ಲಿ ಜಾತಿ ಆಧಾರಿತ ಜನಗಣತಿಗೆ ಕಾಂಗ್ರೆಸ್ ಪ್ರಬಲವಾಗಿ ಒತ್ತಾಯ ಮಾಡುತ್ತಿದ್ದರೂ ಸಹ
ಕರ್ನಾಟಕದಲ್ಲಿ 50 ವರ್ಷಗಳ ಕಾಲ ಒಂದು ರಾಜಕೀಯ ಚಳುವಳಿಯಾಗಿ ಕೆಲಸ ಮಾಡಿದ ದಲಿತ ಸಂಘರ್ಷ ಸಮಿತಿ ಇಂದು ನಿಂತ ನೀರಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಂವಾದ ಮಾಸ ಪತ್ರಿಕೆ ಸಂಪಾದಕರು ಇಂದೂಧರ ಹೊನ್ನಾಪುರ, ಡಿಎಸ್ಎಸ್ ಸಂಚಾಲಕ ಮಾವಳ್ಳಿ ಶಂಕರ್, ವಿಧಾನಪರಿಷತ್ ಮಾಜಿ ಸಭಪತಿ ವಿ.ಆರ್. ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್ ಚಲವಾದಿ ಹಾಗೂ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.