ಹಿಂದೂ ಶಾಸ್ತ್ರದಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳಿಗೆ ಅದರದ್ದೇ ಆದ ನಿಯಮಗಳನ್ನು ಹೇಳಲಾಗಿದೆ. ಉದಾಹರಣೆಗೆ ಊಟದ ವಿಚಾರವಾಗಿರಬಹುದು, ಪೂಜೆಯ ನಿಯಮಗಳಾಗಿರಬಹುದು. ಅದೇ ರೀತಿ, ತಲೆ ಸ್ನಾನ ಮಾಡುವುದಕ್ಕೂ ಶಾಸ್ತ್ರಗಳಲ್ಲಿ ನಿಯಮಗಳಿವೆ. ವಿವಾಹಿತ ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬಾರದು..? ಯಾವ ದಿನ ತಲೆ ಸ್ನಾನ ಮಾಡಬೇಕು..?
ಸುಮಂಗಲಿಯರು ಯಾವ ದಿನ ತಲೆ ಸ್ನಾನ ಮಾಡಬೇಕು, ಯಾವ ದಿನ ಮಾಡಬಾರದು ಎನ್ನುವುದಕ್ಕೂ ನಿಯಮವಿದೆ.
ಈ ಎಲ್ಲಾ ಕಟ್ಟು ಕಟ್ಟಳೆಯನ್ನು ನಮ್ಮ ವಾಸ್ತುವಿನಲ್ಲಿ ವಿವರವಾಗಿ ಬರೆಯಲಾಗಿದೆ. ಈ ನಿಯಮಗಳನ್ನು ಅನುಸರಿಸುವುದರಿಂದ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುವುದು. ಮದುವೆಯಾಗದ ಹೆಣ್ಣು ಮಕ್ಕಳು ಬುಧವಾರದ ದಿನ ತಲೆ ಸ್ನಾನ ಮಾಡಬಾರದು.ಒಂದು ವೇಳೆ ಹೀಗೆ ಮಾಡಿದರೆ ಅವರ ಮದುವೆ ತಡವಾಗುತ್ತದೆಯಂತೆ.
ಇನ್ನು ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಲೆ ಸ್ನಾನ ಮಾಡಬಾರದು.ಆ ದಿನಗಳಲ್ಲಿ ಸ್ನಾನ ಮಾಡುವುದರಿಂದ ಆರ್ಥಿಕ ಸಮಸ್ಯೆ ಎದುರಾಗಿ, ಸಾಲದ ಹೊರೆ ಕೂಡಾ ಹೆಚ್ಚುತ್ತದೆಯಂತೆ.
ಸುಮಂಗಲಿಯರು ಗುರುವಾರ ತಲೆ ಸ್ನಾನ ಮಾಡಿದರೆ ಗಂಡನ ಆಯುಷ್ಯ ಕಡಿಮೆಯಾಗುತ್ತದೆ ಎನ್ನುತ್ತದೆ ಶಾಸ್ತ್ರ. ಜೊತೆಗೆ ಇದು ವಿಷ್ಣು ಮತ್ತು ಲಕ್ಷ್ಮೀಯ ಕೋಪಕ್ಕೂ ಕಾರಣವಾಗುತ್ತದೆಯಂತೆ.
ವಿವಾಹಿತ ಮಹಿಳೆಯರು ಶನಿವಾರ ತಲೆಗೆ ಸ್ನಾನ ಮಾಡಿದರೆ ಶನಿದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.ಮಾತ್ರವಲ್ಲ ಅಮವಾಸ್ಯೆ, ಹುಣ್ಣಿಮೆ ಮತ್ತು ಏಕಾದಶಿಯಂದು ಕೂಡಾ ತಲೆ ಸ್ನಾನ ಮಾಡಬಾರದು.
ವಿವಾಹಿತ ಮಹಿಳೆಯರು ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಿದರೆ ಸಂಪತ್ತು ಹೆಚ್ಚುತ್ತದೆ. ಬೇಗನೆ ಶ್ರೀಮಂತರಾಗಬೇಕೆಂದರೆ ಬುಧವಾರ ಮತ್ತು ಶುಕ್ರವಾರ ತಲೆ ಸ್ನಾನ ಮಾಡಬೇಕು. ಜೊತೆಗೆ ಗಂಡನ ಆಯಸ್ಸು ಅಭಿವೃದ್ದಿ ಕೂಡಾ ಹೆಚ್ಚುತ್ತದೆಯಂತೆ,