ಆಕಾಶ ದೀಪ ಎಂದರೆ ಥಟ್ ಅಂಥ ನೆನಪಾಗೋ ನಟಿ ದಿವ್ಯಾ ಶ್ರೀಧರ್. ಆಕಾಶ ದೀಪ ಸಿನಿಮಾದ ಮೂಲಕ ಸಖತ್ ಖ್ಯಾತಿ ಘಳಿಸಿದ ನಟಿಯ ಹೆಸರು ಕಳೆದ ವರ್ಷ ಕಾಂಟ್ರವರ್ಸಿಸಯಲ್ಲಿ ಕೇಳಿ ಬಂದಿತ್ತು. ಪತಿಯಿಂದ ಮೋಸ ಹೋದ ನಟಿ ಆ ಬಳಿಕ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ತಮಿಳು ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಮನದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.
ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಪತಿ ಅರ್ನವ್ ಕಿರುಕುಳ ವಿರುದ್ಧ ತಿರುಗಿ ಬಿದ್ದಿದ್ದರು. ಗಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಅರ್ನವ್ನನ್ನು ಬಂಧಿಸಿದ್ದರು.
ಚೆನ್ನೈನಲ್ಲಿ ಪ್ರಿಯದರ್ಶಿನಿ ಜೊತೆ ಅರ್ನವ್ ಅಮ್ಜದ್ ಸಹಜೀವನ ನಡೆಸಿದ್ದನಂತೆ. ಅವನು ನನ್ನ ಜೊತೆ ಲಿವಿಂಗ್ ಟು ಗೆದರ್ ಸಂಬಂಧದಲ್ಲಿದ್ದ. ಬಳಿಕ ನಾವಿಬ್ಬರು ವಿವಾಹವಾಗಿ, ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ನನ್ನನ್ನು ಅವನು ದೂರ ಮಾಡಿದ. ಈ ನೋವು ತಾಳಲಾರದೇ ನಾನು ಮಲೇಶಿಯಾಗೆ ಹೊರಟೆ’ ಎಂದು ಪ್ರಿಯದರ್ಶಿನಿ ಆಡಿಯೋದಲ್ಲಿ ಆರೋಪಿಸಿದ್ದರು.
ಮದುವೆಯಾದ ಎರಡು ವರ್ಷಗಳ ಬಳಿಕ ದಿವ್ಯಾ ಗರ್ಭಿಣಿಯಾಗಿದ್ದಾರೆ. ಪತ್ನಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅರ್ನವ್ ವರಸೆ ಬದಲಾಯಿಸಿದ್ದಾನೆ. ಆಕೆಗೆ ಹಿಂಸೆ ನೀಡಲು ಆರಂಭಿಸಿದ್ದಾರೆ. ಈ ವೇಳೆ ಗಂಡನ ವಿರುದ್ಧ ಸಿಡಿದೆದ್ದ ದಿವ್ಯಾ ಆತನಂದ ದೂರವಾಗಿದ್ದರು.
ಬಳಿಕ ಹೆಣ್ಣು ಮಗುವಿಗೆ ಜನ್ಮ ಕೂಡ ಕೊಟ್ಟಿದ್ದರು. ಇದೀಗ ಈಗ ಅವರು ತಮಿಳು ವಾಹಿನಿಯ ಪ್ರಶಸ್ತಿ ಸಮಾರಂಭದಲ್ಲಿ ಮನದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಕೇಸ್ ಇತ್ಯರ್ಥವಾಯ್ತೋ ಇಲ್ಲವೋ! ಆದರೆ ದಿವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆರ್ನವ್ ಜೊತೆಗಿದ್ದ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ.
ಇದೀಗ ನಟಿ ತಮಿಳಿನ ವೇದಿಕೆಯಲ್ಲಿ ಮಾತನಾಡಿದ ದಿವ್ಯಾ ಶ್ರೀಧರ್, “ ನನಗೆ ಕಷ್ಟದ ಸಮಯದಲ್ಲಿ ವಾಹಿನಿ ತುಂಬ ಕೊಟ್ಟಿದೆ. ನನ್ನ ತಾಯಿಗೆ ಅನಾರೋಗ್ಯ ಆದಾಗ ಆರ್ಥಿಕವಾಗಿ ತುಂಬ ಕಷ್ಟದಲ್ಲಿದ್ದೆ. ಆಗ ವಾಹಿನಿಯವರೇ ನನ್ನ ಕೈಹಿಡಿದಿದ್ದು ಎಂದು ಮಗು ಎತ್ತಿಕೊಂಡು ಕಣ್ಣೀರಿಟ್ಟಿದ್ದಾರೆ.
ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಗಂಡನ ವಿರುದ್ಧ ಅನೇಕ ಆರೋಪ ಮಾಡಿದ್ರು. ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಇದೀಗ ದಿವ್ಯಾ ಮಗಳ ಆಗಮನದ ಖುಷಿಯಲ್ಲಿದ್ದಾರೆ.
ಆಕಾಶದೀಪ, ಕಣ್ಮಣಿ ಸೀರಿಯಲ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೇವಂತಿ ಧಾರಾವಾಹಿ ಮೂಲಕ ತಮಿಳು ಕಿರುತೆರೆಗೆ ದಿವ್ಯಾ ಶ್ರೀಧರ್ ಕಾಲಿಟ್ಟಿದ್ದಾರೆ.
ಅರ್ವನ್ ಅಮ್ಜದ್ ಕೂಡ ಕಿರುತೆರೆ ನಟ. ಇಬ್ಬರೂ ಪ್ರೀತಿಸಿ, ಕೆಲ ಸಮಯದ ಹಿಂದಷ್ಟೇ ಮದುವೆಯಾಗಿದ್ದರು. ಈ ನಡುವೆ ದಿವ್ಯಾ ಶ್ರೀದರ್ ಅವರು ಗರ್ಭಿಣಿಯಾಗಿದ್ದರು. ಈ ಸಂದರ್ಭದಲ್ಲಿ ಅರ್ನವ್ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪತಿ ಅರ್ನವ್ ಹಲ್ಲೆ ಮಾಡಿದ ನಂತರದಲ್ಲಿ ದಿವ್ಯಾ ಅವರು ಚೆನ್ನೈನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ನಂತರದಲ್ಲಿ ಅರ್ನವ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.