ಚಿತ್ರದುರ್ಗ: ಹಿಟ್ ಅಂಡ್ ರನ್ ಗೆ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ಮಹಿಳೆಯನ್ನು ಕೂಡ್ಲಿಗಿ ತಾಲೂಕಿನ ಕೆ.ರಾಯಾಪುರ ಗ್ರಾಮದ ಅನಂತಮ್ಮ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯು ಕಳೆದ 10ವರ್ಷಗಳಿಂದ ಕುಟುಂಬ ಸಮೇತರಾಗಿ ಸಕಲೇಶಪುರದ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು.
ದಿನಕ್ಕೆ ಕೇವಲ 70 ರೂ. ಹೂಡಿಕೆಯಿಂದ 3 ಲಕ್ಷ ರೂ. ಗಳಿಸಿ: ಅಂಚೆ ಕಚೇರಿಯ ಬೆಸ್ಟ್ ಸ್ಕೀಮ್ ಇದು!
ಶಿವರಾತ್ರಿ ಹಬ್ಬಕ್ಕಾಗಿ ಸ್ವಗ್ರಾಮ ರಾಯಾಪುರಕ್ಕೆ ತೆರಳುವಾಗ ಮೊಳಕಾಲ್ಮೂರು ತಾಲೂಕಿನ ಬಸಾಪುರ ಗ್ರಾಮದ ಬಳಿ ಈ ರಸ್ತೆ ಅಪಘಾತ ನಡೆದಿದೆ. ಹೈವೇ ಬ್ರಿಡ್ಜ್ ಬಳಿ ಕೆಎಸ್ಆರ್ಟಿಸಿ ಬಸ್ ಇಳಿದು ರಾಂಪುರ ಗ್ರಾಮಕ್ಕೆ ಹೋಗಲು ಹೆದ್ದಾರಿ ದಾಟುತ್ತಿರುವಾಗ ಬಳ್ಳಾರಿಯಿಂದ
ಚಳ್ಳಕೆರೆ ಕಡೆಗೆ ಹೋಗುತ್ತಿದ್ದ ಅಪರಿಚಿತ ಕಾರೊಂದು ವೇಗವಾಗಿ ಬಂದು ರಸ್ತೆ ದಾಟುತ್ತಿದ್ದ ಮಹಿಳೆಗೆ ಗುದ್ದಿ ಎಸ್ಕೇಪ್ ಆಗಿದೆ. ಘಟನೆಯಲ್ಲಿ ಮಹಿಳೆಯ ತಲೆಗೆ ಮತ್ತು ಕಾಲಿಗೆ ತಿವ್ರು ಪೆಟ್ಟಾಗಿ ಸಾವನ್ನಪ್ಪಿದ್ದಾಳೆ.ಇನ್ನು ಘಟನಾ ಸ್ಥಳಕ್ಕೆ ರಾಂಪುರ ಪಿಎಸ್ಐ ಮಹೇಶ ಲಕ್ಷ್ಮಣ್ ಹೊಸಪೇಟೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.