ಹಾವೇರಿ: ಕನ್ನಡ ಚಳವಳಿಗಾರರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದಿಟ್ಟವಾಗಿ ಕನ್ನಡ ಮಾತನಾಡುತ್ತೇನೆ ಎಂದ ಕಂಡಕ್ಟರ್ಗೆ ಅಭಿನಂದನೆ. ಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಒದ್ದು ಹೊರಗೆ ಹಾಕಬೇಕು.
ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ನ್ನು ಕೂಡಲೇ ಹಿಂಪಡೆಯಬೇಕು. ಈ ಘಟನೆಯ ಬಗ್ಗೆ ಮಂತ್ರಿಗಳು ಮೃದುವಾಗಿ ಮಾತನಾಡುತ್ತಾರೆ. ಮಂತ್ರಿಗಳು ಎಲ್ಲೋ ಮರಾಠಿ ಮಾತನಾಡುವವರ ಮುಲಾಜಿಗೆ ಬಿದ್ದಿದ್ದಾರೆ. ಕನ್ನಡ ಚಳವಳಿಗಾರರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
ಚಾಣಕ್ಯನ ಪ್ರಕಾರ ಹೆಂಡತಿ ತನ್ನ ಗಂಡನ ಈ ಕೆಟ್ಟ ಅಭ್ಯಾಸಗಳನ್ನು ಮುಚ್ಚಿಡಬಾರದು..!
ಕೂಡಲೇ ರಾಜ್ಯ ಸರ್ಕಾರ, ಮಹಾರಾಷ್ಟ್ರ ಸರ್ಕಾರದ ಜತೆ ಮಾತನಾಡಬೇಕು. ಪುಂಡರಿಗೆ ಎಚ್ಚರಿಕೆ ಕೊಡಬೇಕು. ಕನ್ನಡಿಗರಿಗೆ ಅವಮಾನ ಮಾಡುವವರ ಮೇಲೆ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಇಲ್ಲಿಯ ಅನ್ನ ತಿಂದು, ನೀರು ಕುಡಿದು ನಾಲಾಯಕ್ ಅನ್ನುವ ಪದ ಬಳಕೆ ಮಾಡುವುದು ಸರಿಯಲ್ಲ. ಕೂಡಲೇ ಇಂಥವರನ್ನು ಗಡಿಪಾರು ಮಾಡಬೇಕು. ಹಿಂದೆ ನಮ್ಮ ಸರ್ಕಾರ ಇದ್ದಾಗ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಆಗ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು ಎಂದರು.