ಬೆಂಗಳೂರು:ಶಾಂತಿನಗರ ಕಾಂಗ್ರೆಸ್ ಮುಖಂಡನ ಬರ್ಬರ ಕೊಲೆ ಹಿಂದೆ ಕೈ ನಾಯಕರ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ.
“ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೆ ಎಂಟ್ರಿಕೊಟ್ಟ ನವರಸನ್
ಶನಿವಾರ ಮಧ್ಯರಾತ್ರಿ ಅಶೋಕನಗರ ಪೊಲೀಸ್ ಠಾಣಾವ್ಯಾಪ್ತಿಯ ಫುಟ್ ಬಾಲ್ ಗ್ರೌಂಡ್ ಬಳಿ ಕಾಂಗ್ರೆಸ್ ಮುಖಂಡ ಹೈದರ್ ಕೊಲೆ ನಡೆದಿತ್ತು. ಶಾಂತಿನಗರ ಶಾಸಕ ಹ್ಯಾರಿಸ್ ಗೆ ಹೈದರ್ ಆಪ್ತನಾಗಿದ್ದ. ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ ಎಂದು ಕಾಂಗ್ರೆಸ್ ವರಿಷ್ಠರು ಕರೆ ಕೊಟ್ಟ ಬೆನ್ನಲ್ಲೇ ಕೈ ಮುಖಂರು ಚುನಾವಣೆಗೆ ತಯಾರಿ ನಡೆಸಿದ್ರು.
ಈ ಬಾರಿ ಬಿಬಿಎಂಪಿ ಚುನಾವಣೆಗೆ ಹೈದರ್ ಸಹೋದರ ಸಲೀಮ್ ಗೆ ಟಿಕೆಟ್ ಕನ್ಫರ್ಮ್ ಅಂತಾ ಇಡೀ ಏರಿಯಾದಲ್ಲಿ ಚರ್ಚೆಯಾಗ್ತಿತ್ತು.ಇದು ಕೆಲ ಕಾಂಗ್ರೆಸ್ ಮುಖಂಡರಿಗೆ ನುಂಗಲಾರದ ತುತ್ತಾಗಿದೆ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗ್ತಿದೆ.ಶಾಸಕ ಹ್ಯಾರಿಸ್ ಮತ್ತು ಹ್ಯಾರಿಸ್ ಪುತ್ರ ನಲಪಾಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಂದಲೇ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ. ಕೊಲೆ ಸಂಬಂಧ ಈಗಾಗ್ಲೆ ಅಶೋಕನ ಪೊಲೀಸ್ರು ನಾಲ್ವರನ್ನ ವಶಕ್ಕೆ ಪಡುದಿದ್ದಾರೆ.ನಲಪಾಡ್ ಆಪ್ತ ವಲದಲ್ಲಿ ಗುರುತಿಸಿಕೊಂಡಿದ್ದ ನಾಜ್ ಸೇರಿ ನಾಲ್ವರನ್ನ ಅಶೋಕ ನಗರ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.ಇನ್ನೂ ಈ ನಾಜ್ ಗೆ ಶಾಂತಿನಗರದ ಮತ್ತೊಬ್ಬ ಕಾಂಗ್ರೆಸ್ ಮುಖಂಡ, ರಾಜ್ಯಯೂತ್ ಕಾಂಗ್ರೆಸ್ ನ ಪದಾಧಿಕಾರಿಯೊಬ್ಬ ಸಾಥ್ ನೀಡಿದ್ದಾನೆ ಎನ್ನಲಾಗ್ತಿದೆ.