ಕನ್ನಡದ ಬಿಗ್ಬಾಸ್ ಸೀಸನ್ 11 ಕೊನೆಯಾಗಿ ಹಲವು ದಿನಗಳೇ ಕಳೆದಿದೆ. ದೊಡ್ಮನೆಯಿಂದ ಹೊರ ಬಂದ ಬಳಿಕ ಸ್ಪರ್ಧಿಗಳು ಭೇಟಿಯಾಗೋದು ಕಾಮನ್. ಅಂತೆಯೇ ಬಿಗ್ ಬಾಸ್ ಸೀಸನ್ ೧೧ರ ಸ್ಪರ್ಧಿಗಳು ಕೂಡ ಆಗಾಗ ಭೇಟಿಯಾಗುತ್ತಿರುತ್ತಾರೆ. ಅಂತೆಯೇ ಇದೀಗ ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ಗೌತಮಿ ಪತಿ ಅಭಿಷೇಕ್ ಮತ್ತೆ ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ.
ಇದೀಗ ಮತ್ತೆ ಬಿಗ್ಬಾಸ್ ಗೆಳೆಯ, ಗೆಳತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು, ಒಂದೇ ಫೋಟೋದಲ್ಲಿ ಮತ್ತೆ ಗೌತಮಿ, ಉಗ್ರಂ ಮಂಜು, ಹಾಗೂ ಅಭಿಷೇಕ್ ಅವರು ಮೈಸೂರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡ್ತಿದ್ದಾರೆ. ಇನ್ನೂ ಬಿಗ್ ಬಾಸ್ ಸೀಸನ್ ೧೧ರಿಂದ ಹೊರ ಬಂದ ಹಲವು ಸ್ಪರ್ಧಿಗಳು ಗರ್ಲ್ಸ್ ವರ್ಸರ್ ಬಾಯ್ಸ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ.