ಬಾಂಗ್ಲಾ ವಿರುದ್ಧದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯದೊಂದಿಗೆ ಟೂರ್ನಿಯಿಂದಲೇ ಬಾಂಗ್ಲಾದೇಶ ಮತ್ತು ಅತಿಥೇಯ ಪಾಕಿಸ್ತಾನ ನಿರ್ಗಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್ಗಳಲ್ಲಿ 236 ರನ್ ಗಳಿಸಿತು. ಸುಲಭ ಸವಾಲನ್ನು ಪಡೆದ ನ್ಯೂಜಿಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಅಂತಿಮವಾಗಿ 46.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 240 ರನ್ ಹೊಡೆದು ಸೆಮಿಫೈನಲ್ ಪ್ರವೇಶಿಸಿತು.
ಪಂದ್ಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿತ್ತು.
ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಜಯಗಳಿಸಿ ಬಾಂಗ್ಲಾ ವಿರುದ್ಧ ಪಾಕ್ ಗೆದ್ದಿದ್ದರೆ ರನ್ ರೇಟ್ ಆಧಾರದಲ್ಲಿ ತಂಡಗಳು ಸೆಮಿಫೈನಲ್ ಪ್ರವೇಶಿಸಬೇಕಿತ್ತು. ಆದರೆ ಈಗ ಬಾಂಗ್ಲಾ ಸೋಲುವ ಮೂಲಕ ನ್ಯೂಜಿಲೆಂಡ್ ಮತ್ತು ಭಾರತ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿವೆ.
ನ್ಯೂಜಿಲೆಂಡ್ ಪರ ಡಿವೋನ್ ಕಾನ್ವೇ 45 ಎಸೆತಗಳಲ್ಲಿ 6 ಬೌಂಡರಿ ನೆರವಿಂದ 30 ರನ್, ರಚಿನ್ ರವೀಂದ್ರ 105 ಎಸೆತಗಳಲ್ಲಿ 1 ಸಿಕ್ಸರ್, 12 ಬೌಂಡರಿ ನೆರವಿನಿಂದ 112 ರನ್ ಹೊಡೆದರು. ಟಾಮ್ ಲ್ಯಾಥಮ್ 76 ಎಸೆತಗಳಲ್ಲಿ 55 ರನ್ ಹೊಡೆದರು. ಬಾಂಗ್ಲಾ ಪರ ತಸ್ಕಿನ್ ಅಹ್ಮದ್, ನಹಿದ್ ರಾಣಾ, ಮುಸ್ತಾಫಿಜುರ್ ರೆಹಮಾನ್, ರಿಷದ್ ಹೊಸೈನ್ ತಲಾ ಒಂದೊಂದು ವಿಕೆಟ್ ಉರುಳಿಸಿದರು
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪರ ತಾಂಜಿದ್ ಹಸನ್ 24 ಎಸೆತಗಳಲ್ಲಿ 2 ಸಿಕ್ಸರ್, 1 ಬೌಂಡರಿ ನೆರವಿನಿಂದ 24 ರನ್, ನಜ್ಮುಲ್ ಹೊಸೇನ್ 110 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 77 ರನ್, ಜಾಕರ್ ಅಲಿ 55 ಎಸೆತಗಳಲ್ಲಿ 1 ಸಿಕ್ಸರ್ 3 ಬೌಂಡರಿ ನೆರವಿನಿಂದ 45 ರನ್, ರಿಷದ್ ಹುಸೇನ್ 25 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 26 ರನ್ ಕಲೆ ಹಾಕಿ ಹಾಕಿದರು.
ನ್ಯೂಜಿಲೆಂಡ್ ಪರ ಮೈಕೆಲ್ ಬ್ರೇಸ್ವೆಲ್ 4 ವಿಕೆಟ್, ವಿಲ್ ಒ’ರೂರ್ಕ್ 2 ವಿಕೆಟ್, ಮ್ಯಾಟ್ ಹೆನ್ರಿ ಮತ್ತು ಕೈಲ್ ಜೇಮಿಸನ್ ತಲಾ ಒಂದೊಂದು ವಿಕೆಟ್ ಪಡೆದರು.