ಪ್ರಯಾಗ್ ರಾಜ್ನ ಮಹಾಕುಂಭಮೇಳ ಇದೀಗ ಅಂತಿಮ ಘಟ್ಟ ತಲುಪಿದೆ. ಜ.13ರಂದು ಆರಂಭಗೊಂಡಿರುವ ಮಹಾಕುಂಭವು ಇದೀಗ ಫೆ.26ರಂದು ಅಂತ್ಯಗೊಳಲಿದ್ದು, ಈ ಬಾರಿಯ ಮಹಾಕುಂಭ ಹಲವು ವಿಶೇಷತೆಗಳಿಂದ ಗಮನ ಸೆಳೆದಿದ್ದು ಉಂಟು.. ಹಲವು ಅಪಘಾತಗಳ ಕಾರಣಕ್ಕೆ ಸುದ್ದಿಯಾಗಿದ್ದು ಉಂಟು..
Hubballi: ಸಾರಿಗೆ ಸಿಬ್ಬಂದಿಗೆ ಹಲ್ಲೆ ಪ್ರಕರಣ: ಕಾನೂನು ಕ್ರಮಕ್ಕೆ ಐಜಿಪಿಗೆ ಮೊರೆ!
ಆದರೆ ಈ ಬಾರಿಯ ಕುಂಭಮೇಳ ಕೆಲವರಿಗೆ ಹೊಸ ಹೊಸ ಬ್ಯುಸಿನೆಸ್ ಐಡಿಯಾಗಳನ್ನು ಕೊಟ್ಟಿದ್ದಂತೂ ಸುಳ್ಳಲ್ಲ.. ಮಹಾಕುಂಭಮೇಳದಲ್ಲಿ ಚಹಾ ಅಂಗಡಿ ಇಟ್ಕೊಂಡು ದುಡ್ಡು ಮಾಡಿದೋರು ಇದ್ದಾರೆ.. ಹಲ್ಲು ಉಜ್ಜೋಕೆ ಬೇವಿನ ಕಡ್ಡಿ ಮಾರಿ ದಿನಕ್ಕೆ ಸಾವಿರ ಗಟ್ಟಲೇ ಲಾಭ ಗಳಿಸೋದರು ಇದ್ದಾರೆ.. ಈ ಮಧ್ಯೆ ಇಲ್ಲೊಬ್ಬ ವ್ಯಕ್ತಿಯು ಡಿಜಿಟಲಸ್ ಸ್ನಾನದ ಮೂಲಕ ಹೊಸ ಬ್ಯುಸಿನೆಸ್ ಆರಂಭಿಸಿದ್ದಾನೆ..
ಎಸ್.. ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿಸಂಗಮದಲ್ಲಿ ಪುಣ್ಯ ಸ್ನಾನ ಮಾಡಬೇಕು ಅನ್ನೋದು ಎಲ್ಲರ ಮಹದಾಸೆ.. ಆದರೆ ಕೆಲವರಿಗೆ ಹಣ ಅಥವಾ ಸಮಯ ಹೀಗೆ.. ಯಾವುದೋ ಕಾರಣಕ್ಕೆ ಅಲ್ಲಿಗೆ ಹೋಗೋದಕ್ಕೆ ಆಗ್ತಿರಲ್ಲ.. ಇದನ್ನೇ ಬಂಡವಾಳವಾಗಿಟ್ಟುಕೊಂಡ ವ್ಯಕ್ತಿಯೊಬ್ಬ ಹೊಸ ಐಡಿಯಾ ಮಾಡಿದ್ದಾನೆ.. ನಿಮ್ಮ ಫೋಟೋವನ್ನು ವಾಟ್ಸಪ್ ಮಾಡಿದರೆ ಅದರ ಪ್ರಿಂಟ್ ಔಟ್ ತಗೊಂಡು ಡಿಜಿಟಲ್ ಸ್ನಾನ ಮಾಡಿಸೋ ಬ್ಯುಸಿನೆಸ್ ಮಾಡ್ತಿದ್ದಾನೆ..
ದೀಪಕ್ ಗೋಯಲ್ ಎಂಬಾತ ‘ಪ್ರಯಾಗ್ ಎಂಟರ್ಪ್ರೈಸಸ್’ ಎಂಬ ಹೆಸರಿನಲ್ಲಿ ಹೊಸ ಬಿಸಿನೆಸ್ ಆರಂಭಿಸಿದ್ದು, ವಾಟ್ಸಾಪ್ ಮೂಲಕ ಆತನ ಫೋನ್ಗೆ ಫೋಟೊ ಕಳಿಸಿದರೆ ಸಾಕು, ಕೇವಲ 24 ಗಂಟೆಯಲ್ಲಿ ಫೋಟೋದ ಪ್ರಿಂಟ್ ತೆಗೆದು ತ್ರಿವೇಣಿ ಸಂಗಮದಲ್ಲಿ ಅದಕ್ಕೆ ಪುಣ್ಯಸ್ನಾನ ಮಾಡಿಸಲಾಗುತ್ತದೆ. ಈ ಸೇವೆಗೆ 1,100 ರು. ಫೀಸ್ ಅಂತಾ ದೀಪಕ್ ಸ್ವತಃ ವಿಡಿಯೋದಲ್ಲಿ ಹೇಳ್ಕೊಂಡಿದ್ದಾನೆ.
ಈ ವಿಡಿಯೊವನ್ನು ಆಕಾಶ್ ಬ್ಯಾನರ್ಜಿ ಅನ್ನೋರು ಶೇರ್ ಮಾಡಿದ್ದು, ‘ಅದ್ಭುತವಾದ ಎಐ ಐಡಿಯಾ. ಹೊಸ ಯೂನಿಕಾರ್ನ್ ಕಂಪನಿ ಪತ್ತೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಹಳಷ್ಟು ವೈರಲ್ ಆಗಿದ್ದು, ಕೆಲವರು ಈತನ ಬುದ್ದಿವಂತಿಕೆಗೆ ಶಹಬ್ಬಾಸ್ ಗಿರಿ ಕೊಟ್ರೆ, ಮತ್ತೆ ಕೆಲವರು ಟೀಕಿಸುತ್ತಿದ್ದಾರೆ. ಅದೇನೆ ಇರ್ಲಿ ಈತ ಹೀಗೆ ಡಿಜಿಟಲ್ ಪುಣ್ಯಸ್ನಾನದ ವಿಡಿಯೋಗಳು ಮಾತ್ರ ಸಖತ್ ವೈರಲ್ ಆಗ್ತಿವೆ.