ಬೆಂಗಳೂರು: ಸರ್ಕಾರಕ್ಕೆ ತಾಕತ್ ಇದ್ದಿದ್ರೆ ದೇಶದ್ರೋಹಿಗಳು ಕಲ್ಲೆಸೆದಾಗ ನಿಷೇಧಾಜ್ಞೆ ಹೇರಬೇಕಿತ್ತು ಎಂದು ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ತಾಕತ್, ಯೋಗ್ಯತೆ ಇದ್ದಿದ್ರೆ ಆವತ್ತು ದೇಶದ್ರೋಹಿಗಳು ಕಲ್ಲೆಸೆದಾಗ ನಿಷೇಧಾಜ್ಞೆ ಹೇರಬೇಕಿತ್ತು. ಇವತ್ತು ಹಿಂದೂ ಕಾರ್ಯಕರ್ತರು ಹೋರಾಟ ಮಾಡುತ್ತೇವೆ ಎಂದರೆ ನಿಷೇಧಾಜ್ಞೆ ಹೇರೋದು ಅಲ್ಲ.
Jio offer: ಜಿಯೋ ಈ ಬಂಪರ್ ಆಫರ್ ಬಗ್ಗೆ ಗೊತ್ತಾ..? ಇಲ್ಲಿದೆ ನೋಡಿ ಬೆಸ್ಟ್ ಪ್ಲಾನ್
ಯಾಕೆ ಆವತ್ತು ಸರ್ಕಾರ, ಗೃಹ ಇಲಾಖೆ ಸತ್ತು ಹೋಗಿತ್ತಾ?. ಏನೇ ಆದರೂ ನಾವು ಹೋರಾಟ ಮಾಡ್ತೇವೆ, ನಮ್ಮ ಹೋರಾಟ ತಡೆಯಲು ಏನೇ ನಿಷೇಧಾಜ್ಞೆ ಹಾಕಿದ್ರೂ ಆಗಲ್ಲ. ಇವತ್ತು ಎಲ್ಲ ಹಿಂದೂಪರ ಸಂಘಟನೆಯವರು ಭಾಗವಹಿಸ್ತಿದ್ದಾರೆ ಎಂದು ಹೇಳಿದರು.
ಅಟ್ಟಹಾಸದ ಆಡಳಿತ ರಾಜ್ಯದಲ್ಲಿ ಮರುಕಳಿಸುತ್ತಿದೆ ಅನಿಸ್ತಿದೆ. ಪೊಲೀಸ್ ಠಾಣೆಗೇ ಕಲ್ಲೆಸೆಯುವ, ಪೊಲೀಸರನ್ನೇ ಎದುರಿಸುವ ಮಟ್ಟಕ್ಕೆ ಹೋಗಿದ್ದಾರೆ ಆಂದ್ರೆ ಪೊಲೀಸ್ ಇಲಾಖೆ, ಸರ್ಕಾರ ಅಸಹಾಯಕವಾಗಿದೆ. ಅನಿವಾರ್ಯವಾಗಿ ಹಿಂದೂಗಳ ರಕ್ಷಣೆಗೆ ನಾವು ನಿಲ್ಲಬೇಕಿದೆ ಎಂದು ಹೇಳಿದರು.