ಹಾಸನ : ಟ್ರಿಪ್ ಹೊರಟಿದ್ದವರ ವಾಹನದ ಮೇಲೆ ಪುಂಡರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಹಾಸನ ಹೊರವಲಯ, ರಾಷ್ಟ್ರೀಯ ಹೆದ್ದಾರಿ 75ರ ಬಳಿಯ ಕೆಂಚಟ್ಟಹಳ್ಳಿ ಸಮೀಪ ಘಟನೆ ನಡೆದಿದೆ.
ಬೆಂಗಳೂರಿನಿಂದ ಕುದುರೆಮುಖಕ್ಕೆ ಎರಡು ಕುಟುಂಬಗಳು ಒಂದು ಕಾರು ಮತ್ತು ಮಿನಿ ಬಸ್ನಲ್ಲಿ ಟ್ರಿಪ್ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಡಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಮಹಿಳೆಯರು ಜೋರಾಗಿ ಮಾತನಾಡುತ್ತಾ ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಡಾಬಾದಲ್ಲಿ ಮದ್ಯ ಸೇವಿಸಿ ಊಟ ಮಾಡುತ್ತಿದ್ದ ನಾಲ್ವರು ಅಪರಿಚಿತ ಯುವಕರು, ಜೋರಾಗಿ ಮಾತನಾಡಬೇಡಿ ಎಂದು ಅವಾಜ್ ಹಾಕಿದ್ದಾರೆ.
ಈ ವೇಳೆ ಟ್ರಿಪ್ ಹೊರಟಿದ್ದ ಕುಟುಂಬಗಳು ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದಾಗಿ ಸಿಟ್ಟಾದ ಯುವಕರು ಡಾಬಾದಿಂದ ಹೊರಗೆ ಬಂದು ಮಿನಿ ಬಸ್ ಮೇಲೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲೆಸೆದು ಎಸ್ಕೇಪ್ ಆಗಿದ್ದಯ, ಮಿನಿಬಸ್ ಮುಂಭಾಗದ ಗಾಜು ಪುಡಿಪುಡಿಯಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.