ಬೆಂಗಳೂರು: ಸ್ನೇಹಿತರ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ನಡೆದಿದೆ. ಆಂಧ್ರ ಮೂಲದ ಸುಬ್ರಮಣಿ (23) ಎಂಬಾತನ ಕೊಲೆಯಾಗಿದೆ. ಕೊಲೆ ಮಾಡಿರುವ ಮುರುಳೀಧರ್ ಸಿಂಗ್, ಗಣೇಶ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ʼನಲ್ಲಿ ಸಾಲ ಮಾಡಿದ ವ್ಯಕ್ತಿ ಸಾವನ್ನಪ್ಪಿದ್ರೆ ಆ ಸಾಲ ತೀರಿಸೋರು ಯಾರು..? ಇಲ್ಲಿದೆ ಲೋನ್ ರೂಲ್ಸ್
ಆಂಧ್ರದಿಂದ ದುಡಿಯೋಕೆ ಅಂತಾ ಬೆಂಗಳೂರಿಗೆ ಬಂದಿದ್ದ ಸ್ನೇಹಿತರು, ನಿನ್ನೆ ಭಾನುವಾರದ ಹಿನ್ನೆಲೆ ಎಲ್ಲರೂ ಪಾರ್ಟಿಗೆ ಸೇರಿದ್ರು. ಈ ವೇಳೆ ಮಾತುಕತೆ ಮಾಡುವ ಜಗಳ ಆರಂಭವಾಗಿದೆ.
ಇಬ್ಬರು ಆರೋಪಿಗಳು ಜಗಳದ ನಡುವೆ ಸುಬ್ರಮಣಿಯನ್ನ ಕೊಲೆ ಮಾಡಿದ್ದಾರೆ. ಇನ್ನೂ ಘಟನೆ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.