ಹುಬ್ಬಳ್ಳಿ; ಶಿಶಿರ ಋತುವಿನ ಪ್ರಮುಖ ಬೆಳೆಯಾದ ಕಡಲೆ ಕೊಯ್ಲು ಹೋಬಳಿಯ ವ್ಯಾಪ್ತಿಯಲ್ಲಿ ಆರಂಭವಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಷ್ಟು ಇಳುವರಿ ಇಲ್ಲ. ಒಕ್ಕಣೆ ಸಮಯದಲ್ಲಿ ಧಾರಣೆಯು ತೀವ್ರ ಗತಿಯಲ್ಲಿ ಕುಸಿಯುತ್ತಿರುವುದು ರೈತರನ್ನು ಇನ್ನಷ್ಟ ಆತಂಕಕ್ಕೆ ದೂಡಿದೆ.
ಪ್ರತಿ ಎಕರೆಗೆ ಬಿತ್ತನೆ ಬೀಜಕ್ಕೆ ₹2000. ಔಷಧಿ, ಗೊಬ್ಬರಕ್ಕೆ ₹8000. ಕೊಯ್ಲು ಹಾಗೂ ಯಂತ್ರದ ಮೂಲಕ ಕಡಲೆ ಬೇರ್ಪಡಿಸುವಿಕೆಗೆ ₹5000. ಉಳುಮೆಗೆ ₹2,000. ಒಟ್ಟಾರೆ ಪ್ರತಿ ಎಕರೆ ಕಡಲೆ ಬೆಳೆ ಬೆಳೆಯಲು ಅಂದಾಜು ₹15,000 ರಿಂದ ₹20,000 ಖರ್ಚು ತಗುಲುತ್ತದೆ. ಆದರೆ ಹಾಕಿದ ಬಂಡವಾಳವೂ ವಾಪಸ್ ಬರದಿದ್ದರೆ ಹೇಗೆ ಎಂದು ರೈತರು ಚಿಂತಿತರಾಗಿದ್ದಾರೆ.
ನೀವು ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಲು ಮಾವಿನ ಎಲೆಯಿಂದ ಈ ಒಂದು ಕೆಲಸ ಮಾಡಿ ಸಾಕು..!
‘ನವೆಂಬರ್ ಆರಂಭದಲ್ಲಿ ಕಡಲೆ ಬಿತ್ತನೆ ಮಾಡಿದ್ದೆ. ಮೊದಲ ತಿಂಗಳು ಜೋರು ಮಳೆ ಬಿದ್ದ ಪರಿಣಾಮ ಬೆಳೆಗೆ ಹಾನಿಯಾಗಿದ್ದರಿಂದ ಇಳುವರಿ ಕುಸಿಯಿತು’ ಎನ್ನುತ್ತಾರೆ ಅನ್ನದಾತರು. ಎಕರೆಗೆ ಐದರಿಂದ ಏಳು ಕ್ವಿಂಟಲ್ ಇಳುವರಿ ಸಿಗುವ ನಿರೀಕ್ಷೆಯಿದೆ. ಆದರೆ ಕ್ವಿಂಟಲ್ಗೆ ಆರಂಭದಲ್ಲಿ ₹8,000 ಇದ್ದ ಧಾರಣೆ ಈಗ ₹5,500 ರಿಂದ ₹6,000ಕ್ಕೆ ಕುಸಿದಿದೆ. ಬೆಲೆ ಇನ್ನೂ ಇಳಿದರೆ ರೈತರು ನಷ್ಟ ಅನುಭವಿಸಲಿದ್ದಾರೆ’ ಎನ್ನುತ್ತಾರೆ ರೈತರು.
ಸಂಜೆ 5 ರಿಂದ ರಾತ್ರಿ 10 ರವರೆಗೆ ಹಾಗೂ ಮುಂಜಾನೆ 5 ರಿಂದ 10 ರವರೆಗೆ ಕಡಲೆ ಬೆಳೆ ಕಟಾವು ಮಾಡಬೇಕು. ಉರಿ ಬಿಸಿಲಿನಲ್ಲಿ ಕಟಾವು ಸಾಧ್ಯವಾಗದು. ಪ್ರತೀ ಎಕರೆ ಕಡಲೆ ಕಟಾವಿಗೆ ₹2,100 ಗುತ್ತಿಗೆ ನಡೆಯುತ್ತಿದೆ. ಚಿತ್ರದುರ್ಗ ಮಾರುಕಟ್ಟೆ ಹಾಗೂ ಕಡಲೆ ಮಿಲ್ಗಳಿಗೆ ರವಾನಿಸಿ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ರೈತ ಬಸವರಾಜ ನಿಯಂತ್ರಣ ಇಲ್ಲದ ಮಾರುಕಟ್ಟೆಗೆ ಸ್ಥಿರತೆ ನೀಡಬೇಕು, ಬೆಂಬಲ ಬೆಲೆ ನೀಡಿ ಕಡಲೆ ಖರೀದಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.