ಬೆಳಗಾವಿ : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಮರಾಠಿ ಯುವಕರ ಗೂಂಡಾಗಿರಿ ಪ್ರಕರಣ ವಿಚಾರವಾಗಿ ಮಾತಾಡುತ್ತ ಕನ್ನಡಿಗರ ವಿರುದ್ದ ನಾಲಿಗೆ ಹರಿಬಿಟ್ಟಿದ್ದ ಎಂಇಎಸ್ ಮುಖಂಡನ ವಿರುದ್ದ ಇದೀಗ ಕೇಸ್ ದಾಖಲಾಗಿದೆ.
ಕಂಡಕ್ಟರ್ ಗೆ ನೀಚ, ಕನ್ನಡ ಪರ ಹೋರಾಟಗಾರರಿಗೆ ನಾಲಾಯಕ ಎಂದಿದ್ದ ಎಂಇಎಸ್ ಮುಖಂಡ ಶುಭಂ ಶಳಕೆಗೆ ಬಿಸಿ ಮುಟ್ಟಿಸಿರುವ ಪೊಲೀಸರು, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಲಿಸಿಕೊಂಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ವಿಡಿಯೋ ಬಿಡುಗಡೆ ಮಾಡುವ ಕನ್ನಡ ಮರಾಠಿ ಭಾಷಾ ಬಾಂಧವ್ಯ ಹಾಳು ಮಾಡಲು ಯತ್ನಿಸಿದ ಆರೋಪದಡಿ ಬಿಎನ್ಎಸ್ ಕಾಯ್ದೆಯಡಿ 192, 352, 353 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ಭಾಗದಲ್ಲಿ ಪ್ರತಿಭಟನೆ ; ಕೊಲ್ಲಾಪುರ ಬಸ್ ಸಂಚಾರ ಸ್ಥಗಿತ
ಕರ್ನಾಟಕದಲ್ಲಿ ಕಂಡಕ್ಟರ್ ಹಲ್ಲೆ ಖಂಡಿಸಿ ಹೋರಾಟ ನಡೆಸಿದ್ದ ಕನ್ನಡ ಪರ ಸಂಘಟನೆ ಕಾರ್ಯಕರ್ತರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಎಂಇಎಸ್ ಮುಖಂಡ ಶುಭಂ ಶಳಕೆ, “ಕನ್ನಡ ಪರ ಹೋರಾಟಗಾರರು ನಾಲಾಯಕರು. ನಿರ್ವಾಹಕ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ. ಇಂತಹ ನೀಚ, ನಾಲಾಯಕ ನಿರ್ವಾಹಕ ಪರ ನಿಂತು ಕನ್ನಡ ಪರ ಸಂಘಟನೆಗಳು ಸಹ ನಾಲಾಯಕರು” ಅಂತ ಎಂದು ಬೆಳಗಾವಿ ನೆಲದಲ್ಲೇ ನಿಂತುಕೊಂಡೇ ನಾಲಿಗೆ ಹರಿ ಬಿಟ್ಟಿದ್ದನು.
ಇನ್ನೂ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಮೋಹನ್ ಹಂಚಿನಮನಿ ಎಂಬಾತನನ್ನು ಬಂದಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಐದಕ್ಕೇರಿದ್ದು ನಾಪತ್ತೆಯಾದ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆದಿದೆ.