ಬೆಂಗಳೂರು:ಕನ್ನಡದ ತೇಜೋವಧೆ ಮಾಡಿದವರ ವಿರುದ್ಧ ಕ್ರಮಕ ಆಗಬೇಕು ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದರು.
ಮಲೇಶ್ವರಂನಲ್ಲಿ ಮಾತನಾಡಿದ ಅವರು, ಈ ನೆಲದ ನೀರು,ಗಾಳಿ,ಅನ್ನ ಸೇವಿಸಿಕೊಂಡು ಕನ್ನಡದ ವಿರುದ್ಧ ಮಾತನಾಡುವುದನ್ನ ಯಾರು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮೊನ್ನೆ ಬೆಳಗಾವಿಯಲ್ಲಿ ಶಾಸಕ ಬಾಳೆಕುಂದ್ರಿ ಕನ್ನಡದ ತೇಜೋವಧೆ ಮಾಡಿರುವ ಘಟನೆಯನ್ನ ಯಾರು ಸಹಿಸಿಕೊಳ್ಳಲು ಆಗಲ್ಲ. ಅನೇಕ ಕನ್ನಡಪರ ಹೋರಾಟಗಾರರ ಹೇಳಿಕೆಯನ್ನ ನೋಡಿದ್ದೇನೆ.ರಾಜ್ಯದ ವಿರುದ್ಧ ಪಿತೂರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈ ವೇಳೆ ವಿಜಯೇಂದ್ರ ಆಗ್ರಹಿಸಿದ್ದಾರೆ.