ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾದ ಕೆಲವೇ ವರ್ಷಗಳಲ್ಲಿ ದೂರ ದೂರವಾದರು. ಇಬ್ಬರ ಡಿವೋರ್ಸ್ ಗೆ ಕಾರಣ ಏನು ಎಂಬುದು ಮಾತ್ರ ಇದುವರೆಗೂ ರಿವೀಲ್ ಆಗಿಲ್ಲ. ಇದೀಗ ನಿವೇದಿತಾ ಗೌಡ ತಮ್ಮ ಬದುಕಿನಲ್ಲಿ ಹೊಸ ರಾಜಕುಮಾರನನ್ನು ಎದುರು ನೋಡುತ್ತಿದ್ದಾರೆ.
ಹೌದು, ನಿವೇದಿತಾ ಗೌಡ ಇದೀಗ ಹೊಸ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಜೊತೆ ಅವರು ಬರೆದುಕೊಂಡಿರುವ ಸಾಲುಗಳ ಸದ್ಯ ಅನೇಕರ ಗಮನವನ್ನು ಸೆಳೆಯುತ್ತಿವೆ. ಸಿಂಹಾಸನ, ಕಿರೀಟ, ಮತ್ತು ರಾಜ್ಯವನ್ನು ನನಗಾಗಿ ತರುವ ವ್ಯಕ್ತಿಯ ನಿರೀಕ್ಷೆಯಲ್ಲಿ ನಾನು ಇದ್ದೇನೆ ಎಂದು ನಿವೇದಿತಾ ಗೌಡ ಬರೆದುಕೊಂಡಿದ್ದು, ಕಿರೀಟ, ಚಪ್ಪಾಳೆ ಮತ್ತು ನೇಲ್ ಪೆಂಟ್ ಎಮೋಜಿಗಳನ್ನು ಹಾಕಿಕೊಂಡಿದ್ದಾರೆ.
ನಿವೇದಿತಾ ಗೌಡ ಅವರ ಈ ಬರಹವನ್ನು ಕಂಡು ಅನೇಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ನಿವಿ ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಯಾರು ಆ ರಾಜಕುಮಾರ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಚಂದನ್ ಶೆಟ್ಟಿಯ ನೆನಪುಗಳನ್ನು ಸಂಪೂರ್ಣವಾಗಿ ಮರೆತು ನಿವೇದಿತಾ ಗೌಡ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಚರ್ಚೆಯನ್ನು ಕೂಡ ಶುರುವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಿವಿ, ತಾನು ತನ್ನ ಬೆಸ್ಟ್ ಫ್ರೆಂಡ್ ಈ ವಿಚಾರವನ್ನು ಹೇಳಿದ್ದು ಎಂದು ಹೇಳಿದ್ದಾರೆ. ಆದರೆ ಆ ಬೆಸ್ಟ್ ಫ್ರೆಂಡ್ ಯಾರು ಅಂತೇಳಿಲ್ಲ. ಹೀಗಾಗಿಯೇ ಆ ಫ್ರೆಂಡ್ ನಿವೇದಿತಾ ಗೌಡ ಅವರ ರೀಲ್ಸ್ ಪಾರ್ಟನರ್ ವಾಣಿಶ್ರೀ ಇರಬಹುದಾ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ.
ಇದೇ ವೇಳೆ ನಿವೇದಿತಾ ರಾಜಕುಮಾರನನ್ನು ಕೆಲವರು ಊಹಿಸಿದ್ದಾರೆ. ೨೦೨೫ರ ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬವನ್ನ ಆಚರಿಸಲು ಹೊರ ದೇಶಕ್ಕೆ ಪ್ರವಾಸಕ್ಕೆ ಹೋದಾಗ ಕಟ್ಟು ಮಸ್ತಾದ ಯುವಕನೊಬ್ಬನ ಜೊತೆ ಬಾನಂಗಳದಲ್ಲಿ ಆಕಾಶಬುಟ್ಟಿಯ ಉಡಾವಣೆಯನ್ನು ಮಾಡಿದ್ದರು. ತಮ್ಮ ಮನದ ಆಸೆ-ಆಕಾಂಕ್ಷೆಗಳೆಲ್ಲ ಈಡೇರಲಿ ಎಂಬ ಪ್ರಾರ್ಥನೆಯನ್ನು ಮಾಡಿದ್ದರು. ಹೀಗಾಗಿ ಬಹುಶಃ ಆ ಸಿಕ್ಸ್ ಪ್ಯಾಕ್ ಹುಡುಗನ ನಿವೇದಿತಾ ಅವರ ರಾಜಕುಮಾರನಿರಬಹುದ ಎಂದು ಹಲವರು ಅಂದುಕೊಳ್ಳುತ್ತಿದ್ದಾರೆ.